ಮೈಸೂರು:
ನಟ ಚಿಕ್ಕಣ್ಣ ಅವರು ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿ ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಪಡೆಯುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.
ಮೈಸೂರು ಮೃಗಾಲಯದಲ್ಲಿ ಒಂದು ವರ್ಷದ ಅವಧಿಗೆ 35 ಸಾವಿರ ರೂ ಹಣ ನೀಡಿ ಒಂದು ವರ್ಷದ ಅವಧಿಗೆ ನಟ ಚಿಕ್ಕಣ್ಣ ಚಿರತೆ ದತ್ತು ಪಡೆದಿದ್ದಾರೆ. ದತ್ತು ಪಡೆದ ಚಿರತೆಗೆ ‘ಭೈರ’ ಎಂದು ನಾಮಕರಣ ಮಾಡಿದ್ದು, ನಟ ಚಿಕ್ಕಣ್ಣ ಜೊತೆ ಹಲವು ಸ್ನೇಹಿತರು ಪ್ರಾಣಿಗಳ ದತ್ತು ಸ್ವೀಕಾರ ಮಾಡಿದ್ದಾರೆ.
ಈ ಹಿಂದೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸೃಜನ್ ಲೋಕೇಶ್ ಸಹ ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದರು. ಇದೀಗ ನಟ ಚಿಕ್ಕಣ್ಣ ಕೂಡ ಪ್ರಾಣಿಗಳ ಮೇಲೆ ಪ್ರೀತಿ ತೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
