ʼSBIʼ ಗ್ರಾಹಕರ ಗಮನಕ್ಕೆ ; ಜ.1ರಿಂದ ʼಹೊಸ ಚೆಕ್ ಪೇಮೆಂಟ್ʼಸಿಸ್ಟಮ್​ ಜಾರಿ!!

ನವದೆಹಲಿ:

     ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಚೆಕ್‌ ವಹಿವಾಟುಗಳಿಗೆ ಪಾಸಿಟಿವ್​ ಪಾವತಿ(ಪಾಸಿಟೀವ್ ಪೇ) ವ್ಯವಸ್ಥೆ ರೂಪಿಸಲು ಸಜ್ಜಾಗಿದ್ದು, ಈ ಹೊಸ ಚೆಕ್​ ಪಾವತಿ ವ್ಯವಸ್ಥೆ 2021ರ ಜನವರಿ 1ರಿಂದ ಜಾರಿಗೆ ಬರಲಿದೆ.

ಪಾಸಿಟಿವ್ ಪೇ ಸಿಸ್ಟಮ್ :

      ಪಾಸಿಟಿವ್ ಪೇ ಪರಿಕಲ್ಪನೆಯು ದೊಡ್ಡ ಮೌಲ್ಯದ ಚೆಕ್ʼಗಳ ಪ್ರಮುಖ ವಿವರಗಳನ್ನ ಮರು ದೃಢೀಕರಿಸುವ ಒಂದು ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ  ಚೆಕ್ ನೀಡುವ ವ್ಯಕ್ತಿಯ ದಿನಾಂಕ, ಫಲಾನುಭವಿಗಳ ಹೆಸರು, ಸ್ವೀಕರಿಸುವವರ ಹೆಸರು ಹಾಗೂ ಪಾವತಿಯ ಮೊತ್ತವನ್ನು ಮರು ಚೆಕ್​ ನೀಡುವ ವ್ಯಕ್ತಿಯ ಈ ಮಾಹಿತಿಯನ್ನು ಎಲೆಕ್ಟ್ರಾನಿಕ್​ ವಿಧಾನಗಳಾದ ಎಸ್​ಎಂಎಸ್​, ಮೊಬೈಲ್​ ಅಪ್ಲಿಕೇಷನ್​, ಇಂಟರ್​ನೆಟ್​ ಬ್ಯಾಂಕಿಂಗ್​ ಅಥವಾ ಎಟಿಎಂ ಮೂಲಕ ಒದಗಿಸಬಹುದು. ಈ ಬಳಿಕ ಚೆಕ್​ ಪಾವತಿಸುವ ಮೊದಲ ಈ ಎಲ್ಲ ವಿವರಗಳನ್ನು CTS ನಿಂದ ಕ್ರಾಸ್ ಚೆಕ್ ನಡೆಸಲಾಗುತ್ತದೆ. ಚೆಕ್​ನಲ್ಲಿ ಯಾವುದೇ ಅಕ್ರಮ ಕಂಡು ಬರದಿದ್ದಲ್ಲಿ ಪಾವತಿ ಮಾಡಲಾಗುತ್ತದೆ. ಯಾವುದೇ ವ್ಯತ್ಯಾಸಗಳು ಕಂಡುಬಂದ್ರೆ, ಬ್ಯಾಂಕಿಗೆ ತಿಳಿಸಲಾಗುತ್ತೆ ಮತ್ತು ಪರಿಹಾರ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತೆ.

     ಆದ್ರೆ, ಹೊಸ ನಿಯಮದ ಪ್ರಕಾರ, ಪ್ರಮುಖ ವಿವರಗಳ ಮರು-ದೃಢೀಕರಣವು ₹50,000ಕ್ಕಿಂತ ಹೆಚ್ಚಿನ ಹಣ ಪಾವತಿಗಳಿಗೆ ಅಗತ್ಯವಿದೆ. ಪಾಸಿಟಿವ್ ಪೇ ಸಿಸ್ಟಮ್ ಆಯ್ಕೆಯನ್ನ ತಮ್ಮ ಗ್ರಾಹಕರಿಗೆ ಪರಿಚಯಿಸಿದ ಎಸ್ ಬಿಐ, ಯಾವುದೇ ಪ್ರಶ್ನೆಯಿದ್ದರೆ ತಮ್ಮ ಹತ್ತಿರದ ಶಾಖೆಯನ್ನ ಸಂಪರ್ಕಿಸಲು ಸೂಚಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap