ಕೀರ್ತಿ ಪ್ರಭು ಸ್ವಾಮಿಗಳ ನಿರಂಜನ ಶರಪಟ್ಟಾಧಿಕಾರ ಮಹೋತ್ಸವ

0
34

ಬೆಂಗಳೂರು

         ಕನಕಪುರದ ಶ್ರೀ ದೇಗುಲ ಮಠದಲ್ಲಿ ನವೆಂಬರ್ 17 ಮತ್ತು 18 ರಂದು ಕೀರ್ತಿ ಪ್ರಭು ಸ್ವಾಮಿಗಳ ನಿರಂಜನ ಶರಪಟ್ಟಾಧಿಕಾರ ಮಹೋತ್ಸವ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇಗುಲ ಮಠದ ಅಧ್ಯಕ್ಷರಾದ ಡಾ. ಮುಮಡಿ ನಿರ್ವಹಣ ಮಹಾಸ್ವಾಮಿಗಳು ತಿಳಿಸಿದರು.

         ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಕಪುರದಲ್ಲಿರುವ ಶ್ರೀ ದೇಗುಲ ಮಠವು ಅಲ್ಲಮ ಪ್ರಭುಗಳ ಶೂನ್ಯ ಪರಂಪರೆಯ ಮಠವಾಗಿದ್ದು, ಸುಮಾರು 650 ವರ್ಷಗಳ ಇತಿಹಾಸವಿದೆ. ಶ್ರೀ ಮಠದ ವ್ಯವಸ್ಥೆಯನ್ನು ಮುನ್ನೆಡೆಸಲು ಹಾಗೂ ಮಠದ ಗುರು ಪರಂಪರೆಯನ್ನು ಮುಂದುವರೆಸುವ ಉದ್ದೇಶದಿಂದ ಹುಣಸೂರು ತಾಲ್ಲೂಕು, ಮಾದಹಳ್ಳಿಯ ಉಕ್ಕಿನ ಕಂತೆ ಶಾಖಾ ಮಠದ ಅಧಿಪತಿಗಳಾಗಿದ್ದ ಕೀರ್ತಿ ಪ್ರಭು ಸ್ವಾಮಿ ಎಂಬ ವಟುವನ್ನು ಡಾ. ಮುಮಡಿ ನಿರ್ವಹಣಾ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

         ನವೆಂಬರ್ 17 ರಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಧಾರಾವಾಡ ಮುರುಘ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯುವ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಅಧ್ಯಕ್ಷತೆ ವಹಿಸಲಿದ್ದಾರೆ.

        ನವೆಂಬರ್ 18 ರಂದು ಬ್ರಾಹ್ಮಿ ಮೂಹೂರ್ತದಲ್ಲಿ ನಿರಂಜನ ಶರಪಟ್ಟಾಧಿಕಾರವು ಶಾಸ್ತ್ರೋಸ್ತ್ರವಾಗಿ ನೆರವೇರಲಿದೆ. ಅನಂತರ ಬೆಳಿಗ್ಗೆ 8 ಗಂಟೆಗೆ ನೂತನ ಶ್ರೀಗಳ ಅವರ ಪಲ್ಲಕ್ಕಿ ಉತ್ಸವ, ಕನಕಪುರ ಪಟ್ಟಣದಲ್ಲಿ ಜರುಗಲಿದೆ. 10.30ಕ್ಕೆ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ಸಮಾರಂಭ ನಡೆಯಲಿದೆ.

         ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗ ಮಹಾ ಸ್ವಾಮೀಜಿ, ಕಾಡು ಸಿದ್ದೇಶ್ವರ ಮಠದ ಕರೀವೃಷಭ ದೇಶೀ ಕೇಂದ್ರ ಶಿವಯೋಗಿಶ್ವರ ಮಹಾ ಸ್ವಾಮೀಜಿ, ದೇವನೂರು ಮಠದ ಮಹಾಂತ ಸ್ವಾಮೀಜಿ, ವಹಿಸಲಿದ್ದಾರೆ.

        ದೇಗುಲ ಮಠದ ಶ್ರೀ ಮುಮಡಿ ನಿರ್ವಹಣಾ ಮಹಾ ಸ್ವಾಮೀಜಿಗಳು, ಶ್ರೀ ಮುಮಡಿ ಶಿವ ರುದ್ರಸ್ವಾಮೀಗಳು, ಉಕ್ಕಿನ ಕಂತೆ ಮಠದ ಸಾಂಬಾ ಸದಾಶಿವ ಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ನಡೆಯಲಿರುವ ಸಮಾರಂಭದ ಉದ್ಘಾಟನೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೆರವೇರಿಸುವರು.

        ಅಧ್ಯಕ್ಷತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಹಿಸಲಿದ್ದಾರೆ. ದೇಗುಲ ದರ್ಶನ ಕೃತಿ ಲೋಕಾರ್ಪಣೆಯನ್ನು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಡಲಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ನೂತನ ಶ್ರೀಗಳಾದ ಶ್ರೀ ಕೀರ್ತಿ ಪ್ರಭು ಸ್ವಾಮೀಜಿ, ಚಕ್ರಬಾವಿ ಮಠದ ಸಿದ್ದಲಿಂಗಮಹಾ ಸ್ವಾಮೀಜಿ, ಅಖಿಲ ಭಾರತ ವೀರಶೈವ ಉಪಾಧ್ಯಕ್ಷ ಬಿ.ಎಸ್. ಸಚ್ಚಿದಾನಂದ ಮೂರ್ತಿ, ಮಠದ ಆಡಳಿತಾಧಿಕಾರಿ ಆರ್. ರಂಗನಾಥ್, ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here