ಹೊಸ ವಾಹನ ಖರೀದಿದಾರರಿಗೆ ಕಹಿಸುದ್ದಿ!!

ದೆಹಲಿ:

      ದೇಶಾದ್ಯಂತ ಹೊಸದಾಗಿ ಖರೀದಿಸಲಾದ ವಾಹನಗಳ ನೋಂದಣಿಯನ್ನು ಬುಧವಾರದಿಂದಲೇ ನಿಲ್ಲಿಸಲಾಗಿದ್ದು, ಹೊಸ ವಾಹನ ಖರೀದಿದಾರರಿಗೆ ಕಹಿಸುದ್ದಿಯಾಗಿದೆ.

      ಎಲ್ಲಾ ರೀತಿಯ ಮೋಟಾರ್ ವಾಹನಗಳ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಹೊಸ ವಾಹನ ಖರೀದಿಸಿದರೆ ತಕ್ಷಣವೇ ನೊಂದಣಿ ಸಾಧ್ಯವಾಗುವುದಿಲ್ಲ.

      ಏಪ್ರಿಲ್ 1 ರೊಳಗೆ ಎಲ್ಲ ರೂಪದ ವಾಹನಗಳು ಇನ್‍ಬಿಲ್ಟ್ ಸೆಕ್ಯೂರಿಟಿ ಫೀಚರ್ಸ್ ನೊಂದಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟನ್ನು ಅಳವಡಿಸಿಕೊಂಡು ರೋಡಿಗಿಳಿಯಬೇಕಿತ್ತು. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ನೋಂದಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂಬುದಾಗಿ ತಿಳಿದುಬಂದಿದೆ.

      ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶಗಳು ವಾಹನಗಳ ನೋಂದಣಿಗೆ ವಿಭಿನ್ನ ಸಾಫ್ಟ್ ವೇರ್ ಬಳಸುತ್ತಿರುವುದರಿಂದ ಈ ರಾಜ್ಯಗಳಲ್ಲಿ ನೋಂದಣಿಗೆ ಯಾವುದೇ ಅಡ್ಡಿ ಇರುವುದಿಲ್ಲ.

     ಆದ್ದರಿಂದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಧ್ಯಪ್ರದೇಶಗಳನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲೂ ವಾಹನ ನೋಂದಣಿಗೆ ತಾತ್ಕಾಲಿಕ ತಡೆಯೊಡ್ಡಲಾಗಿದ್ದು, ಕರ್ನಾಟಕವೂ ಈ ಸಮಸ್ಯೆ ಎದುರಿಸಲಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap