ಬೆಂಗಳೂರು:
ಬಹುಭಾಷಾ ನಟ ಅರ್ಜುನ್ಸರ್ಜಾ ಮತ್ತು ಇತರರ ವಿರುದ್ದ #Metoo ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ರವರು ಪ್ರಕರಣದ ಸಂಬಂಧ ಇಂದು ಮಹಿಳಾ ಆಯೋಗದ ಎದುರು ಹಾಜರಾಗಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ನಾನು ಬಹಳ ಧೈರ್ಯವಂತೆ. ಎಲ್ಲಾ ಮಹಿಳೆಯರಿಗೂ ಒಂದಲ್ಲ ಒಂದು ಭಾರಿ ಲೈಂಗಿಕ ದೌರ್ಜನ್ಯವಾಗಿರುತ್ತದೆ. ಆದರೆ ಹೇಳಿಕೊಳ್ಳುವ ಧೈರ್ಯವಿರುವುದಿಲ್ಲ. ನನ್ನ ಬಳಿ ಪ್ರಕರಣದ ಕುರಿತು ವಿಡಿಯೋ ದಾಖಲೆಗಳಿವೆ. ಅದನ್ನ ಕೋರ್ಟ್ ಗೆ ಹಾಜರುಪಡಿಸಿದ್ದೇನೆ ಎಂದಿದ್ದಾರೆ.
ಈ ವೇಳೆ ಮಾಧ್ಯಮದವರು ಎದುರಾಗಿ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಕಂಡು ಗರಂ ಆದ ಅವರು, ಲೋಗೋಗಳನ್ನು ತಳ್ಳಿ ಮತ್ತೆ ಕ್ಷಮೆಯಾಚಿಸಿ, ಮಾಧ್ಯಮಗಳ ಮೇಲೆ ಗೌರವವಿದೆ ಎಂದು ಹಾರಿಕೆ ಉತ್ತರವನ್ನು ನೀಡಿದ್ದಾರೆ.
ಬಳಿಕ ಮಹಿಳಾ ಆಯೋಗದ ಸಿಬ್ಬಂದಿ ಜೊತೆ ಇಂಗ್ಲೀಷಿನಲ್ಲಿ ಮಾತನಾಡುತ್ತಾ, ಮಾಧ್ಯಮದವರ ಕಡೆ ಬೊಟ್ಟು ಮಾಡುತ್ತಾ ನಾನೊಂದು ಸಕ್ಕರೆ ಇದ್ದ ಹಾಗೆ.. ಅದಕ್ಕೆ ನನ್ನ ಹೀಗೆ ಫಾಲೋ ಮಾಡ್ತಾರೆ. ‘ಸಕ್ಕರೆ ಇರುವ ಕಡೆ ಇರುವೆಗಳ ಬರುವುದು ಸಹಜ’ ಎಂದು ತಮ್ಮನ್ನು ಸಕ್ಕರೆಗೆ ಬಣ್ಣಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ #MeToo ಕ್ಯಾಂಪೇನ್ನಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಆರೋಪ ಮಾಡಿದ ಬೆನ್ನಲ್ಲೇ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಶ್ರುತಿ ಹರಿಹರನ್ ಹೇಳಿಕೆ ಪಡೆಯುವ ಸಂಬಂಧ ನೋಟಿಸ್ ನೀಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ