ಬೆಂಗಳೂರು:
ಕಲ್ಯಾಣಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವತಿಯರ ಸಹಿತ ಒಂದೇ ಕುಟುಂಬದ ಐವರು ನೀರುಪಾಲಾದ ಘಟನೆ ಬೆಂಗಳೂರಿನ ಹೊರವಲಯ ನೆಲಮಂಗಲದ ಸಮೀಪವಿರುವ ಸಿದ್ದರಬೆಟ್ಟ ಬಳಿ ಇಂದು ಮಧ್ಯಾನ ನಡೆದಿದೆ.
ನೀರುಪಾಲಾದವರನ್ನು ಕೆಂಗೇರಿ ನಿವಾಸಿಗಳಾದ ರೇಷ್ಮಾ(22) ಮುಬೀನ್ ತಾಜ್(21), ಯಾರಬ್ ಖಾನ್(21), ಸಲ್ಮಾನ್ ಹಾಗೂ ಮುನೀರ್ ಖಾನ್(49) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಕೆಂಗೇರಿ ನಿವಾಸಿಗಳು ಎಂದು ತಿಳಿದುಬಂದಿದೆ.
ಪಿಕ್‌ನಿಕ್‌ಗೆ ತೆರಳಿದ್ದ ವೇಳೆ ಮೊದಲು ಕಲ್ಯಾಣಿಗೆ ಇಳಿದಿದ್ದ ರೇಷ್ಮಾ, ಸಲ್ಮಾನ್ ಹಾಗೂ ಯಾರಬ್ ಆಕಸ್ಮಿಕವಾಗಿ ನೀರಲ್ಲಿ ಮುಳುಗಿದ್ದಾರೆನ್ನಲಾಗಿದೆ. ಇವರನ್ನು ರಕ್ಷಿಸಲು ಮುಂದಾದ ಮುನೀರ್ ಖಾನ್ ಮತ್ತು ಮುಬೀನ್ ತಾಜ್ ಕೂಡಾ ನೀರುಪಾಲಾದರು ಎಂದು ತಿಳಿದುಬಂದಿದೆ.
ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಎರಡು ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನುಳಿದವರ ಶೋಧಕಾರ್ಯ ನಡೆಯುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ