ಬೆಳಗಾವಿ:

ನನಗೆ ನನ್ನ ಕೆಲಸ ಉಸಿರುಗಟ್ಟಿಸುತ್ತಿದೆ ಎಂದು ಸ್ಪೀಕರ್ ರಮೇಶ್ಕುಮಾರ್ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದ ಕಲಾಪದ ವೇಳೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕಲಾಪದ ವೇಳೆ ಮಾತನಾಡಿದ ಅವರು, ನನಗೆ ಈ ಕೆಲಸ ಸಾಕಾಗುತ್ತಿದೆ, ಉಸಿರು ಗಟ್ಟುತ್ತಿದೆ. ಶಾಸಕರನ್ನು ತರಬೇತಿಗೆ ಕರೆದ್ರೆ ಬರುವುದಿಲ್ಲ. ಪಕ್ಷದವರು ತಾವೇ ತರಬೇತಿ ಕೊಡಲ್ಲ. ಪ್ರಶ್ನೋತ್ತರದಲ್ಲಿ ಉಪಪ್ರಶ್ನೆ ಕೇಳಿ ಅಂದ್ರೆ ಭಾಷಣ ಮಾಡ್ತಾರೆ. ಮೂರು ಉಪಪ್ರಶ್ನೆ ಕೇಳಬೇಕಾದ ಕಡೆ, ಮೂವತ್ತು ಜನ ಎದ್ದು ನಿಲ್ಲುತ್ತಾರೆ. ಹೀಗಾದ್ರೆ ಸದನ ನಡೆಸೋದು ಹೇಗೆ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








