ಲಾಕ್‌ಡೌನ್‌ ಮುಗಿಯುವವರೆಗೂ SSLC, PUC ಪರೀಕ್ಷೆ ಇಲ್ಲ!!

ಬೆಂಗಳೂರು :

      SSLC, PUC ಪರೀಕ್ಷೆ ದಿನಾಂಕವನ್ನು ಲಾಕ್ಡೌನ್ ಅವಧಿ ಮುಗಿದ ಬಳಿಕ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಉನ್ನತ ಮೂಲಗಳಿಂದ ತಿಳಿದುಬಂದಿದೆ.

      ಕರೋನಾ ವೈರಸ್ ನಿಯಂತ್ರಣಕ್ಕಾಗಿ ಘೋಷಿಸಲಾಗಿದ್ದ 21ದಿನಗಳ ಲಾಕ್ ಡೌನ್ ಅವಧಿ ಏಪ್ರಿಲ್ 14ರಂದು ಅಂತ್ಯಗೊಳ್ಳಲಿದ್ದು, ಇದನ್ನು ಈಗ ಮತ್ತೆ ಎರಡು ವಾರಗಳ ಕಾಲ ಮುಂದುವರೆಸಲಾಗಿದೆ.

ಏ.30 ರವರೆಗೆ ಭಾರತ ಲಾಕ್ ಡೌನ್ ವಿಸ್ತರಣೆ!!

      ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯ್ಯೂರಪ್ಪನವರು ಮಹತ್ವದ ಮುನ್ಸೂಚನೆ ನೀಡಿದ್ದು, ಏಪ್ರಿಲ್ 30ರಂದು ಲಾಕ್ ಡೌನ್ ಅವಧಿ ಪೂರ್ಣಗೊಳ್ಳಲಿದ್ದು, ಈ ಬಾರಿಯ ಲಾಕ್ಡೌನ್ ನಿಯಾಮಾವಳಿಗಳು ಬಹಳಷ್ಟು ಕಠಿಣವಾಗಿರಲಿದೆ ಎಂದು ತಿಳಿಸಿದ್ದಾರೆ.

      ಈ ನಡುವೆ ಲಾಕ್‌ಡೌನ್‌ ಮುಗಿಯುವರೆಗೂ SSLC, PUC ಪರೀಕ್ಷೆ ಇಲ್ಲ ಎನ್ನಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡ ತೊಡಗಿದೆ. ಪರೀಕ್ಷೆ ಬಗ್ಗೆ ಲಾಕ್‌ಡೌನ್‌ ಮುಗಿದ ಬಳಿಕವೇ ಎಲ್ಲ ಗೊಂದಲಗಳಿಗೆ ಉತ್ತರ ಸಿಗಲಿದ್ದು, ಮಕ್ಕಳಿಗೆ ಕ್ರ್ಯಾಶ್‌ಕೋರ್ಸ್‌ ನಡೆಸಲು ಕೂಡ ಇಲಾಖೆ ಮುಂದಾಗಿದೆ ಎನ್ನಲಾಗಿದೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap