ಮುಖ್ಯಮಂತ್ರಿಗಳ ಇ-ಮೇಲ್ ಐಡಿ ಬದಲಾವಣೆ!

ಬೆಂಗಳೂರು:

      ನಿಮ್ಮ ಸಮಸ್ಯೆಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಏನಾದರೂ ಅಹವಾಲು ಸಲ್ಲಿಸಬೇಕೆಂದರೆ  ಬೇರೆ ಬೇರೆ ಇ-ಮೇಲ್ ಐಡಿಗಳಿಗೆ ಇನ್ನು ಇ-ಮೇಲ್​ ಮಾಡಬೇಕಾಗಿಲ್ಲ. ಒಂದೇ ಒಂದು ಇ-ಮೇಲ್ ಐಡಿಗೆ ಕಳುಹಿಸಿದರೆ ಸಾಕು.

     ಹೌದು, ಸದ್ಯ ಮುಖ್ಯಮಂತ್ರಿಗಳ ಸಚಿವಾಲಯವು 3 ಸಕ್ರಿಯ ಇ-ಮೇಲ್ ವಿಳಾಸಗಳನ್ನು ಹೊಂದಿದ್ದು ಇದರಿಂದ ಹಲವು ಅನಗತ್ಯ ಗೊಂದಲಗಳು ಉಂಟಾಗುತ್ತಿದ್ದವು, ಇದರಿಂದ ಅಡಳಿತ ವ್ಯವಸ್ಥೆಯ ಚುರುಕು ತನದ ಮೇಲೆ ನಿಧಾನವಾದ ಪ್ರಕ್ರಿಯೆ ಉಂಟಾಗುತಿತ್ತು.

      ಇದನ್ನು ಮನಗಂಡು ಮುಖ್ಯಮಂತ್ರಿ ಸಚಿವಾಲಯವು, ಇನ್ಮುಂದೆ 2021ರ ಜನವರಿ ಒಂದನೇ ದಿನಾಂಕದಿಂದ ಅನ್ವಯವಾಗುವಂತೆ ರಾಜ್ಯದ ಜನತೆ ತಮ್ಮ ಅಹವಾಲು ಮತ್ತು ಇತರ ಸಂವಹನವನ್ನು cm.kar@nic.in ಮೇಲ್ ಐಡಿ ಮೂಲಕವೇ ಮಾಡುವಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap