ಬೆಂಗಳೂರು :
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಹಿಳಾ ದಿನಾಚರಣೆಯ ದಿನವಾದ ಇಂದು, ಮಹಿಳೆಯರಿಗೆ ರಾಜ್ಯ ಬಜೆಟ್ ನಲ್ಲಿ ಭರ್ಜರಿ ಬಂಫರ್ ಗಿಫ್ಟ್ ನೀಡಿದ್ದಾರೆ. 1 ಲಕ್ಷ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಬಸ್ ಪಾಸ್ ನೀಡಲಾಗುತ್ತದೆ ಎಂಬುದಾಗಿ ಘೋಷಿಸಿದ್ದಾರೆ.
ಬಿಎಂಟಿಸಿ ಹಾಗೂ ಕಾರ್ಮಿಕ ಕಲ್ಯಾಣ ಇಲಾಖೆಯ ಜೊತೆಗೂಡಿ ಬೆಂಗಳೂರಿನ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಬಸ್ ಪಾಸ್ ವಿತರಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮುಂದೆ ಸಲ್ಲಿಸಿದ್ದರು. ಈ ಯೋಜನೆಗೆ ಇಂದು ಮಂಡಿಸಿದ ಬಜೆಟ್ ನಲ್ಲಿ ಅನುಮೋದನೆ ನೀಡಿದ್ದಾರೆ.
ಈ ಹಿನ್ನಲೆಯಲ್ಲಿ ಮಹಿಳಾ ಕಾರ್ಮಿಕರಿಗೆ ಈ ವರ್ಷದಿಂದಲೇ ಉಚಿತ ಬಿಎಂಟಿಸಿ ಬಸ್ ಪಾಸ್ ದೊರೆಯಲಿದೆ. ಈ ಮೂಲಕ ಮಹಿಳೆಯರಿಗೆ ರಾಜ್ಯ ಬಜೆಟ್ ನಲ್ಲಿ ಮಹಿಳಾ ದಿನಾಚರಣೆಯಂದೇ ಸಿಎಂ ಬಂಫರ್ ಗಿಫ್ಟ್ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
