ರೈತರ ಪಿಎಲ್ ಡಿ ಬ್ಯಾಂಕ್ ಬಡ್ಡಿ ಮನ್ನಾ..!

ಬೆಳಗಾವಿ:

      ತಮ್ಮ ಬಜೆಟ್ ನಲ್ಲಿ ರಾಜ್ಯದ ರೈತರ ಸಾಲ ಮನ್ನಾ ಘೋಷಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈಗ ರಾಜ್ಯ ಸರ್ಕಾರದಿಂದ  ರೈತ ಸಮುದಾಯಕ್ಕೆ ಮತ್ತೊಂದು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದಾರೆ.Image result for karnataka farmers money

      ರಾಜ್ಯದ ಒಟ್ಟು 178 ಬ್ಯಾಂಕ್ ಗಳು 1,432 ಕೋಟಿ ರೂಪಾಯಿ ಸಾಲ ನೀಡಿದ್ದು, ಪಿಎಲ್ ಡಿ ಬ್ಯಾಂಕ್ ಗಳ 2017-18 ನೇ ಸಾಲಿನ ಬಡ್ಡಿ ಮೊತ್ತವನ್ನು ಮನ್ನಾ ಮಾಡುವ ಕುರಿತಂತೆ ಸಹಕಾರ ಇಲಾಖೆ ಮೂಲಕ ಸಿಎಂಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದ್ದಾರೆ. ಈ ಕುರಿತು ಸುವರ್ಣ ವಿಧಾನ ಸೌಧದಲ್ಲಿ ಇಂದು ಪ್ರಕಟಿಸುವ ನಿರೀಕ್ಷೆ ಇದೆ

      ರಾಜ್ಯ ಸರ್ಕಾರ ತನ್ನ ಬಜೆಟ್ನಲ್ಲಿ ರೈತರ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿದ ಬಳಿಕ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವವರು ಮರುಪಾವತಿಯನ್ನು ನಿಲ್ಲಿಸಿರುವ ಪರಿಣಾಮ ಈ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಬಡ್ಡಿ ಮನ್ನಾ ಮಾಡಿದರೆ ರೈತರು ಅಸಲು ಮರು ಪಾವತಿಸಬಹುದೆಂಬ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ನಿರ್ಧಾರಕ್ಕೆ ಬಂದಿದ್ದಾರೆಂದು ಹೇಳಲಾಗಿದೆ.

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link