ಹಾಸನ :
ದೇವೇಗೌಡರ ಮೇಲೆ ಅವರ ಮಕ್ಕಳಿಂದ ಹಲ್ಲೆಯಾಗಿರುವ ವಿಡಿಯೋವನ್ನು ಸಂದರ್ಭ ಬಂದಾಗ ಬಿಡುಗಡೆ ಮಾಡುವೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ. ಮಂಜು ಹೊಸ ಬಾಂಬ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಅವರು ಹಾಸನ ನಗರ ವಿಧಾನಸಭಾ ಸದ್ಯಸ ಪ್ರೀತಮ್ ಅವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಅಪ್ಪ ಅಮ್ಮನಿಗೆ ಹೊಡೆಯೋದನ್ನು ಕೇಳಿದ್ದೇವೆ. ಇಂತಹ ಘಟನೆ ಅವರ ಮನೆಯಲ್ಲೂ ನಡೆದಿದೆ ಎಂದು ಜಗತ್ತೇ ಮಾತನಾಡುತ್ತಿದೆ. ದೇವೇಗೌಡರ ಮನೆಯಲ್ಲಿ ಅವರ ಮೇಲೆ ಮಕ್ಕಳಿಂದ ಹಲ್ಲೆಯಾಗಿದೆ ಎಂದು ಪರೋಕ್ಷವಾಗಿ ಹೇಳಿದ ಎ ಮಂಜು ಅವರು ಈ ಬಗ್ಗೆ ಸಂದರ್ಭ ಬಂದಾಗ ವೀಡಿಯೋ ಬಿಡುಗಡೆ ಮಾಡುವೆ. ಈಗ ವೀಡಿಯೋ ಬಿಡುಗಡೆ ಮಾಡಿದರೆ ಚುನಾವಣೆಗಾಗಿ ವಿಡಿಯೋ ಬಿಟ್ಟಿದ್ದಾರೆ ಅಂತ ಎಲ್ಲರೂ ಮಾತನಾಡಿಕೊಳ್ತಾರೆ ಹೀಗಾಗಿ ಸಮಯ ಬಂದಾಗ ಬಿಡುಗಡೆ ಮಾಡುವೆ ಎಂದು ಹೇಳಿದ್ದಾರೆ.
ಇನ್ನೂ ಇದೇ ವೇಳೆ ತಮ್ಮ ರಾಜಕೀಯ ಎದುರಾಳಿ ಸಚಿವ ಹೆಚ್.ಡಿ ರೇವಣ್ಣನವರ ವಿರುದ್ದ ಹರಿಹಾಯ್ದ ಅವರು ಬಸವಾಪಟ್ಟಣದ ಇಬ್ಬರು ಎಂಜಿನಿಯರ್ ಮೃತಪಟ್ಟರು. ಅವರು ಯಾರ‍್ಯಾರು..? ಯಾಕೆ ಸತ್ತರು..? ಅನ್ನೋದನ್ನು ರೇವಣ್ಣ ಹೇಳಲಿ ಎಂದು ಎ.ಮಂಜು ಸವಾಲು ಹಾಕಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
