ಲೈಟ್ ಫಿಶಿಂಗ್ : ಕಡಿವಾಣ ಹಾಕಲು ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಒತ್ತಾಯ …!!!

ಮಲ್ಪೆ 

        ಆಳ ಸಮುದ್ರದಲ್ಲಿ ಅತಿ ಪ್ರಖರ ಬೆಳಕನ್ನು ಹಾಯಿಸಿ ಅಕ್ರಮವಾಗಿ  ಮೀನುಗಳನ್ನು  ಹಿಡಿಯುತ್ತಿರುವ ಬೋಟುಗಳನ್ನು ಜಪ್ತು ಮಾಡಬೇಕು ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಂಪ್ರದಾಯಿಕ ಮೀನುಗಾರರು ಅಧಿಕಾರಿಗಳಿಗೆ ದಿಗ್ಬಂಧನ ಹಾಕಿ ಒತ್ತಾಯಿಸಿದ್ದಾರೆ.  

      ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ಮತ್ತು ಸಹಾಯಕ ನಿರ್ದೇಶಕ ಶಿವಕುಮಾರ್ ಅವರು ಬೆಳಿಗ್ಗೆ ಮಲ್ಪೆ ಬಂದರಿನಲ್ಲಿರುವ ತಮ್ಮ ಕಚೇರಿಗೆ ಆಗಮಿಸುವಾಗ ನಾಡದೋಣಿ ಮೀನುಗಾರರ ಒಕ್ಕೂಟ ಮತ್ತು ಆಳಸಮುದ್ರ ಟ್ರಾಲ್ ಬೋಟು ಮಾಲಕರ ಸಂಘದ ಸದಸ್ಯರು ಮುತ್ತಿಗೆ ಹಾಕಿ ಲೈಟ್ ಫಿಶಿಂಗ್ ನಡೆಸುತ್ತಿರುವ ಮೀನುಗಾರರ ಮೇಲೆ ತಕ್ಷಣ ಕ್ರಮಕ್ಕೆ ಪಟ್ಟು ಹಿಡಿದರು ಎಂದು ತಿಳಿದು ಬಂದಿದೆ.

       ಇತ್ತ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದರಾದರೂ, ಮೀನುಗಾರರು ಈಗ ಸಮುದ್ರದಲ್ಲಿ ಲೈಟ್ ಫಿಶಿಂಗ್ ಮಾಡುತ್ತಿರುವವರನ್ನು ಹಿಂದಕ್ಕೆ ಕರೆಸಬೇಕು ಎಂದು ಹಠ ಹಿಡಿದರು.  ಈ ಸಂದರ್ಭದಲ್ಲಿ ಅಧಿಕಾರಿಗಳು ಅಸಹಾಯಕರಾದಾಗ ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಅಕ್ರಮ ಲೈಟ್ ಪಿಶಿಂಗ್ ಮಾಡುವವರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಬೇಕು, ಇಲ್ಲದಿದ್ದಲ್ಲಿ ಮೀನುಗಾರಿಕಾ ಕಚೇರಿ ಮುಂದೆ ಕುಳಿತು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು ಎಂದು ತಿಳಿದು ಬಂದಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link