ಹೆಣ್ಣನ್ನು ನಂಬಬೇಡಿ, ನೋ ಯೂಸ್ : ಹೀಗೊಂದು ಲೈ(ಲ)ವ್ ಸೂಸೈಡ್..!?

ತುಮಕೂರು:

      ಹೆಣ್ಣನ್ನು ನಂಬಬೇಡಿ, ನೋ ಯೂಸ್ ಎಂದು ಹೇಳುವ ಮೂಲಕ ವ್ಯಕ್ತಿಯೋರ್ವ ಫೇಸ್ ಬುಕ್ ನಲ್ಲಿ ಲೈವ್ ಸೂಸೈಡ್ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕೆ.ಕೆ.ಪಾಳ್ಯದಲ್ಲಿ ನಡೆದಿದೆ.

      ಮೃತ ವ್ಯಕ್ತಿಯನ್ನು ನಿರಂಜನ್(36) ಅಂತ ತಿಳಿದು ಬಂದಿದ್ದು, ನಿರಂಜನ್​ ಖಾಸಗಿ ಫ್ಯಾಕ್ಟರಿವೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಾಯುವ ಮುನ್ನ ಫೇಸ್ ಬುಕ್ ನಲ್ಲಿ ಲೈವ್ ಬಂದ್ ಹೆಣ್ಣನ್ನ ನಂಬಬೇಡಿ, ಹೆಣ್ಣುಮಕ್ಕಳು ಯಾವಾಗಲೂ ಮೋಸ ಮಾಡುತ್ತಾರೆ. ನಾವು ಹೆಣ್ಣನ್ನ ದೇವತೆ ಎಂದು ಪೂಜಿಸುತ್ತೇವೆ. ಆದರೆ ನೋ ಯ್ಯೂಸ್ .guilty should be punished ಬೇಸರದಿಂದ ನೇಣಿಗೆ ಶರಣಾಗಿದ್ದಾನೆ. 

      ಆತ್ಮಹತ್ಯೆಗೂ ಮುನ್ನ ರಾಷ್ಟ್ರಗೀತೆ ಹಾಡಿ ತನ್ನ ಪ್ರಾಣಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ನಿರಂಜನ್ ಸಾವಿಗೆ ಪ್ರೇಮ ವೈಫ್ಯಲ್ಯ ಎನ್ನಲಾಗುತ್ತಿದ್ದು, ಘಟನೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link