ರೋಷನ್ ಬೇಗ್ ರಾಜೀನಾಮೆ : ‘ದೋಸ್ತಿ’ಯ ಮತ್ತೊಂದು ವಿಕೆಟ್ ಪತನ!!!

ಬೆಂಗಳೂರು:

      ಮೈತ್ರಿ ಸರಕಾರದಲ್ಲಿ ಶಾಸಕರ ರಾಜೀನಾಮೆ ಪರ್ವ ಮುಂದುವರಿದಿದ್ದು, ಶಿವಾಜಿ ನಗರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ರಾಜೀನಾಮೆ ಸಲ್ಲಿಸಿದ್ದಾರೆ.

      ಇಂದು ಮಧ್ಯಾಹ್ನ ಸ್ಪೀಕರ್ ಅವರನ್ನು ಭೇಟಿಯಾದ ರೋಷನ್ ಬೇಗ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸ್ಪೀಕರ್ ಕೊಠಡಿಯ ಒಳಗೆಡ ಕೃಷ್ಣಬೈರೇಗೌಡ ಮತ್ತು ಕೆಜೆ ಜಾರ್ಜ್ ಇದ್ದರು ಎನ್ನಲಾಗಿದೆ.

      ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರೋಷನ್ ಬೇಗ್, ನಾನು ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ‌ನೀಡಿದ್ದೇನೆ. ಕಾಂಗ್ರೆಸ್ ನನ್ನನ್ನು ಈಗಾಗಲೇ ಅಮಾನುತು ಮಾಡಿದೆ. ಸ್ಪೀಕರ್ ಗೆ ನನ್ನ ರಾಜೀನಾಮೆ‌ ಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು. ಈ ಮೂಲಕ ದೋಸ್ತಿ ಸರ್ಕಾರ 14ನೇ ವಿಕೆಟ್ ಪತನಗೊಂಡಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap