ಪಾಂಡವಪುರ:
ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿ ಬಳಿಕ ಹೆಣ್ಣುಮಗುವಿಗೆ ಜನ್ಮ ನೀಡಿದ ತಾಪಂ ಸದಸ್ಯೆ.
ಪಾಂಡವಪುರ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ನಿವಾಸಿ ತಾಪಂ ಸದಸ್ಯೆ ಮಂಗಳ ನವೀನ್ ಕುಮಾರ್.
ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ತುಂಬು ಗರ್ಭಿಣಿಯಾಗಿದ್ದ ಬಿಜೆಪಿ ತಾಪಂ ಸದಸ್ಯೆ ಮಂಗಳನವೀನ್ ಕುಮಾರ್ ಚಿಕ್ಕಮರಳಿ ಗ್ರಾಮದ ಮತಗಟ್ಟೆಯಲ್ಲಿ ಬೆಳಿಗ್ಗೆ ೭.೩೦ರಲ್ಲಿ ಪತಿ ನವೀನ್ ಅವರೊಂದಿಗೆ ತಮ್ಮ ಹಕ್ಕು ಚಲಾಹಿಸಿದ್ದಾರೆ.ಬಳಿಕ ಮನೆಗೆ ತೆರಳಿದ ವೇಳೆ ಹುಟ್ಟೆನೋವು ಕಾಣಿಸಿಕೊಂಡಿದೆ ತಕ್ಷಣ ಮಂಗಳ ಅವರನ್ನು ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುದಿದ್ದಾರೆ. ಅಲ್ಲಿ ಮಂಗಳ ನವೀನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








