ಮೆಜೆಸ್ಟಿಕ್ ನಲ್ಲಿ ಪಿಸ್ತೂಲ್‌ನೊಂದಿಗೆ ಶಂಕಿತ ಉಗ್ರ !?

ಬೆಂಗಳೂರು:

     ಬೆಂಗಳೂರಿನ ಮೆಜೆಸ್ಟೆಕ್‌ ನಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ ಶಂಕಿತ ಉಗ್ರನೊಬ್ಬ ಆಗಮಿಸಿದ್ದ ಎನ್ನುವ ಸುದ್ದಿಯೊಂದು ಕೇಳಿ ಬರುತ್ತಿದೆ.

      ಮೆಜೆಸ್ಟಿಕ್ ಮೆಟ್ರೋದಲ್ಲಿ ನಿನ್ನೆ ರಾತ್ರಿ ಓರ್ವ ವ್ಯಕ್ತಿ ರಿವಾಲ್ವರ್ ಮತ್ತು ಬ್ಯಾಗ್ ಹಿಡಿದು ಬಂದಿದ್ದು, ಮೆಟಲ್ ಡಿಟೆಕ್ಟರ್ ಬಳಿ ಬಂದಾಗ ಶಬ್ಧ ಕೇಳಿ ಬಂದಿದೆ. ಈ ವೇಳೆ ಮೆಟ್ರೋ ಸಿಬ್ಬಂದಿ ತಪಾಸಣೆ ನಡೆಸಿದ್ದು, ಈ ವೇಳೆ ಭದ್ರತಾ ಸಿಬ್ಬಂದಿಯ ಆ ವ್ಯಕ್ತಿಯನ್ನು ಮೆಟಲ್ ಡಿಟೆಕ್ಟರ್ ಪರಿಶೀಲನೆ ಮಾಡಿದ ವೇಳೆಯಲ್ಲಿ ನಕರಾತ್ಮಕ ಶಬ್ದಹೊರಹೊಮ್ಮಿದೆ. ಇದೇ ವೇಳೆ ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಪ್ರಶ್ನೆ ಮಾಡುತ್ತಿದ್ದ ಹಾಗೇ ಕೂಡಲೇ ಆ ವ್ಯಕ್ತಿ ಅಲ್ಲಿಂದ ಓಡಿ ಹೋಗಿದ್ದಾನೆ ಎನ್ನಲಾಗಿದೆ. 

      ಕೂಡಲೇ ಮೆಟ್ರೋ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೆಟ್ರೋದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್‌ ಅನ್ನು ಹೆಚ್ಚಿಸಲಾಗಿದೆ. ನಿನ್ನೆ ನಡೆದ ಘಟನೆಗೆ ಸಂಬಂಧಪಟ್ಟಂತೆ ಹಿರಿಯ ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯದ ಅಧಾರದ ಮೇಲೆ ತನಿಖೆ ಶುರುಮಾಡಿದ್ದು, ನಾಪತ್ತೆಯಾಗಿರುವ ಆ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

      ಇನ್ನು ಘಟನೆಯಿಂದ ಸಹಜವಾಗಿ ಮೆಟ್ರೋ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇನ್ನು ಮೆಟ್ರೋ ಸೇರಿದಂತೆ ನಗರದ ಎಲ್ಲೆಡೆ ಪೊಲೀಸ್‌ ಇಲಾಖೆ ಭದ್ರತೆಯನ್ನು ಹೆಚ್ಚಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap