ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ನು ಯಾವುದೇ ವಿದ್ಯಾರ್ಹತೆ ಬೇಕಿಲ್ಲ!!!

ಮೈಸೂರು :

      ವಾಹನ ಚಾಲನಾ ಪರವಾನಗಿ ಪಡೆಯಲು ಇನ್ನು ವಿದ್ಯಾರ್ಹತೆ ಬೇಕಿಲ್ಲ ಅಂತ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

      ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಕನಿಷ್ಠ 8ನೇ ತರಗತಿ ಪಾಸಾದವರಿಗೆ ಮಾತ್ರ ವಾಹನ ಪರವಾನಗಿ ನೀಡಲಾಗುತಿತ್ತು. ಆದರೆ ಈಗ ಇನ್ನು ಮುಂದೆ ವಾಹನ ಚಾಲನಾ ಪರವಾನಗಿ ಪಡೆಯಲು ವಿದ್ಯಾರ್ಹತೆ ಬೇಕಿಲ್ಲ ಎಂದು ಕೇಂದ್ರ ಸರಕಾರ ಹೊಸ ಸುತ್ತೋಲೆ ಹೊರಡಿಸಿದೆ ಎಂದು ತಿಳಿಸಿದ್ದಾರೆ.

      ಏನು ಓದದೇ ಇರುವ ದೇಶಾದ್ಯಂತ ಒಟ್ಟು 67 ಲಕ್ಷ ಮಂದಿ ಪರವಾನಗಿ ಇಲ್ಲದೆ ಕದ್ದು ಮುಚ್ಚಿ ವಾಹನ ಚಾಲನೆ ಮಾಡುತ್ತಿದ್ದರು. ಅಂತಹವರನ್ನು ಗಮನದಲ್ಲಿಟ್ಟುಕೊಂಡು ಭಾರತ್ ಇನ್ಫಾರ್ಮಲ್ ವರ್ಕರ್ಸ್ ಇನಿಶಿಯೇಟಿವ್ ಸಂಸ್ಥೆಯೊಂದಿಗೆ ನಾನು ಸೇರಿದಂತೆ ಹಲವರು ದೇಶಾದ್ಯಾಂತ ಅಸಂಘಟಿತ ಕೆಲಸಗಾರರಾದ ವಾಹನ ಚಾಲಕರುಗಳ ಸಭೆ ನಡೆಸಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ್ದೆವು.

      ನಮ್ಮ ವರದಿಯನ್ನು ಪುರಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಂದಿನ ಕೇಂದ್ರ ಸಚಿವ ದಿ.ಅನಂತ್ ಕುಮಾರ್ 2017ರಲ್ಲಿ ಲೋಕಸಭೆಯಲ್ಲಿ ಈ ಬಿಲ್ ಮಂಡಿಸಿ ಅನುಮೋದನೆ ಪಡೆದಿದ್ದರು. ಕೇಂದ್ರ ಸರಕಾರ ಗೆಜಟ್ ನೋಟಿಫಿಕೇಶನ್ ಮನನ ಮಾಡಿ ಎಲ್ಲಾ ರಾಜ್ಯ ಸರಕಾರಗಳಿಗೂ ಸುತ್ತೋಲೆಯನ್ನು ಹೊರಡಿಸಿದೆ. ಈ ಸಂಬಂಧ ಸೆ.1ರಿಂದ ಇದು ಜಾರಿಯಾಗಲಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link