ಆಯುಧಪೂಜೆ ಮುಗಿಸಿ ಕೆರೆಗೆ ಈಜಲು ಹೋದ 3 ಬಾಲಕರ ಸಾವು!!

ಚಿಕ್ಕಮಗಳೂರು :

      ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ಚಿಕ್ಕಮಗಳೂರಿ ತಾಲೂಕಿನ ಬಿಳೇಕಲ್ ಸಮೀಪದ ಕೆಂಚಿನಕಟ್ಟಿ ಕೆರೆಯಲ್ಲಿ ನಡೆದಿದೆ. 

      ಹೌಸಿಂಗ್ ಬೋರ್ಡ್ ನಿವಾಸಿಗಳಾದ ಜೀವಿತ್ (14), ಮುರುಳಿ ಕಾರ್ತಿಕ್ (15), ಚಿರಾಗ್ (16) ಮೃತ ಬಾಲಕರು ಎಂದು ಗುರುತಿಸಲಾಗಿದೆ.

      ನಿನ್ನೆ ಸಂಜೆ ಆಯುಧ ಪೂಜೆ ಮುಗಿಸಿಕೊಂಡು ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

      ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಸದ್ಯ ಮುರುಳಿ ಮತ್ತು ಚಿರಾಗ್ ಮೃತ ದೇಹ ಪತ್ತೆಯಾಗಿದ್ದು, ಜೀವಿತ್ ದೇಹಕ್ಕಾಗಿ ಶೋಧ ಕಾರ್ಯ ನಡೆದಿದೆ.

       ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ