ಬೆಳಗಾವಿ:
ಗೋವಾದಿಂದ ಟ್ರಿಪ್ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದವರ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನ ನಾಗೇನಹಳ್ಳಿ ನಿವಾಸಿ ಬಿ.ಎಸ್ ಬಾಬಯ್ಯ (66), ಅವರ ಸೊಸೆ ಅಜೀರಾಬಿ (33) ಮತ್ತು ಮೊಮ್ಮಗ ಜಯಾದ ಅಬ್ಬಾಸ್ (4) ಮೃತ ದುರ್ವೈವಿಗಳು.
ಜಹೀರ್ ಅಬ್ಬಾಸ್ ಕುಟುಂಬದವರ ಜೊತೆಗೆ ತಮ್ಮ ಕಾರಿನಲ್ಲಿ ಗೋವಾ ಪ್ರವಾಸಕ್ಕೆ ಹೋಗಿದ್ದರು. ಪ್ರವಾಸ ಮುಗಿಸಿ ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದರು. ಆಗ ಹೆಬ್ಬಾಳ ಬಳಿ ಕಾರು ನಿಯಂತ್ರಣ ತಪ್ಪಿ ಎದುರಿನಿಂದ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಬಯ್ಯ, ಅಜೀರಾಬಿ ಮತ್ತು ಜಯಾದ ಅಬ್ಬಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಿ.ಎಸ್.ಬಾಬಯ್ಯ ಅವರ ಪುತ್ರ ಜಹೀರ್ ಅಬ್ಬಾಸ್, ಬಾಬಯ್ಯ ಅವರ ಪತ್ನಿ ಚಾಂದಬೀಬಿ ಮತ್ತು ಮೊಮ್ಮಗ ಜುನೇದ ಅಹ್ಮದ್ ಗಾಯಗೊಂಡಿದ್ದು, ಅವರನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ