ನಾಗರಹೊಳೆಯಲ್ಲಿ ಹುಲಿ ಸಾವು : ವಿಷ ಹಾಕಿ ಕೊಂದಿರುವ ಶಂಕೆ!!

 ಮೈಸೂರು:

      ಮೈಸೂರಿನಲ್ಲಿ ಮತ್ತೊಂದು ಹುಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ವಿಷ ಹಾಕಿ ಹುಲಿಯೊಂದನ್ನು ಕೊಂದಿರಬಹುದು ಎಂದು ಬಲವಾದ ಶಂಕೆ ಹಾಗೂ ಆರೋಪಗಳು ಕೇಳಿಬಂದಿವೆ.

      ಎಚ್.ಡಿ.ಕೋಟೆ ತಾಲೂಕಿನ ಟೈಗರ್ ಬ್ಲಾಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹುಲಿಯ ಮೃತದೇಹ ಹುಲಿಗೆ ವಿಷ ಹಾಕಿ ಕೊಂದಿರಬಹುದು ಎಂಬ ಅನುಮಾನಕ್ಕೆ ಪುಷ್ಟಿವೊದಗಿಸಿದೆ.   

      ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ, ದಿನೇ ದಿನೇ ಹುಲಿಗಳು ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವಾರದ ಹಿಂದಷ್ಟೇ ಒಂದು ಹುಲಿ ಸಾವನ್ನಪ್ಪಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಹುಲಿ ಸಾವನ್ನಪ್ಪಿ, ಅನೇಕ ಅನುಮಾನಗಳಿಗೆ ಕಾರಣವಾಗಿದೆ.

      ಸಾವಿಗೆ ನಿಖರ ಕಾರಣಗಳೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಮೂಲಕ ಹುಲಿಗಳ ಅನುಮಾನಾಸ್ಪದ ಸಾವಿನ ತನಿಖೆಯನ್ನು ಮುಂದುವರೆಸಿದ್ದಾರೆ. ಹುಲಿಗಳ ಸರಣಿ ಸಾವಿನಿಂದಾಗಿ ಅರಣ್ಯ ಇಲಾಖೆಗೆ ತಲೆ ಬಿಸಿಯಾಗಲು ಕಾರಣವಾಗಿದೆ.  

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link