ಗ್ರಾ.ಪಂ.ಪಕ್ಕದಲ್ಲೇ ಬಯಲು ಶೌಚ : ಮಹಿಳೆಯರಿಗೆ ಕಿರಿಕಿರಿ!!

 ದಾಬಸ್ ಪೇಟೆ : 

     ದಾಬಸ್ ಪೇಟೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಜನರು ಸಾರ್ವಜನಿಕವಾಗಿ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುವ ದೃಶ್ಯ ಸಾಮಾನ್ಯವಾಗಿದ್ದು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಮುಜುಗರ ಅನುಭವಿಸುವ ಘಟನೆ ನಿತ್ಯ ಸಾಮಾನ್ಯವಾಗಿದ್ದು. ಇನ್ನೂ ವಿಚಿತ್ರವೆಂದರೆ ಅದರ ಪಕ್ಕದಲ್ಲೇ ಸೋಂಪುರ ಗ್ರಾಮ ಪಂಚಾಯ್ತಿ ಕಾರ್ಯಾಲಯವಿದ್ದು, ಅಲ್ಲಿಗೂ ಮೂತ್ರದ ಗಬ್ಬು ವಾಸನೆ ಬರುತ್ತಿದ್ದರೂ ಪಂಚಾಯ್ತಿ ಅಧಿಕಾರಿಗಳು ಮೂಗು ಮತ್ತು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ಜೊತೆಗೆ ಸಂಜೆಯಾಗುತ್ತಲೇ ಕುಡುಕರ ಹಾಗೂ ಇತರೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದು,್ದ ಈ ಬಗ್ಗೆ ಪೆÇಲೀಸರು ಕ್ರಮವಹಿಸಬೇಕೆಂದು ಸ್ಥಳೀಯ ಯುವ ಮುಖಂಡ ಮಹೇಶ್.ಎಸ್ ಆಗ್ರಹಿಸಿದ್ದಾರೆ.

     ಇನ್ನೂ ಈ ಬಗ್ಗೆ ತುಮಕೂರು ವಿಭಾಗದ ವಿಭಾಗ ನಿಯಂತ್ರಣಾಧಿಕಾರಿಯಾದ ಫಕೃದ್ದೀನ್ ರವರನ್ನು ಸಂಪರ್ಕಿಸಿದಾಗ ಸಾರ್ವಜನಿಕ ಶೌಚಾಲಯವನ್ನು ರಾತ್ರಿ 9ಗಂಟೆವರೆಗೂ ತೆರೆಯಲು ಸೂಚಿಸುತ್ತೇನೆ ಮತ್ತು ಕುಡುಕರ ಹಾಗೂ ಅನೈತಿಕ ಚಟುವಟಿಕೆ ಕಡಿವಾಣ ಹಾಕಲು ದಾಬಸ್ ಪೇಟೆ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿ ರಾತ್ರಿ ವೇಳೆ ಬೀಟ್ ಪೊಲೀಸರು ನಿಗಾ ವಹಿಸುವಂತೆ ಕೋರಿಕೊಳ್ಳಲಾಗುವುದು ಜೊತೆಗೆ ಜನರು ಸಾರ್ವಜನಿಕರ ಸ್ಥಳದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap