ಕೊರೊನಾ ಹಿನ್ನೆಲೆ : ಪಂಢರಪುರಕ್ಕೆ ಕರ್ನಾಟಕ ಭಕ್ತರ ಭೇಟಿಗೆ ನಿಷೇಧ

ಕಲಬುರಗಿ :

     ಪಂಢರಾಪುರದಲ್ಲಿ ನಡೆಯಲಿರುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಅದರಲ್ಲೂ ಕಲಬುರಗಿ ಜಿಲ್ಲೆಯಿಂದ ಭಕ್ತರು ದಿಂಡಿಸ ಮತ್ತು ಪಲ್ಲಕ್ಕಿಯೊಂದಿಗೆ ತೆರಳುವುದಕ್ಕೆ ಕಲಬುರಗಿ ಜಿಲ್ಲಾಡಳಿತ ನಿಷೇಧ ಹೇರಲಾಗಿದೆ.

     ಜಿಲ್ಲಾಧಿಕಾರಿ ವಿ.ವಿ.ಜೋತ್ಸಾ ಈ ಕುರಿತು ಆದೇಶ ನೀಡಿದ್ದು. ಫಂಡರಪುರದಲ್ಲಿ ನಡೆಯುವ ಕಾರ್ತಿಕ ವರಿ ಕಾರ್ಯಕ್ರಮಕ್ಕೆ ಪ್ರತಿವರ್ಷ ಮಹಾರಾಷ್ಟ್, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳಿಂದ ಸುಮಾರು 5 ಲಕ್ಷಕ್ಕಿಂತ ಹೆಚ್ಚು ಭಕ್ತಾದಿಗಳು ಪ್ರತ್ಯೇಕ ತಂಡಗಳೊಂದಿಗೆ ಸುಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದರು.

     ಆದರೆ, ಕೊರೊನಾ ವೈರಸ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಪಂಢರಪುರಕ್ಕೆ ರಾಜ್ಯದ ಭಕ್ತರು ಹೋಗುವುದಕ್ಕೆ ನಿಷೇಧ ಹೇರಲಾಗಿದೆ.

     ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಸೊಲ್ಹಾಪುರ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಸಿಆರ್‌ಪಿಸಿ ಕಲಂ 144ರನ್ವಯ ನವೆಂಬರ್ 24 ರಿಂದ 26ರವರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link