ತುಮಕೂರು :
ಜೆಡಿಎಸ್ ನ ದುಡ್ಡು ತಿನ್ನಿ ಆದರೆ ಬಿಜೆಪಿಗೆ ಮತಹಾಕಿ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಅವರು ಚುನಾವಣಾ ಪ್ರಚಾರದಲ್ಲಿ ತಮ್ಮ ಪಕ್ಷದವರನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಸುರೇಶ್ ಗೌಡರು ಜೆಡಿಎಸ್ ಪಕ್ಷದ ಹಾಗು ನಾಯಕರ ಮೇಲೆ ನಾಲಗೆ ಹರಿಬಿಟ್ಟಿದ್ದಾರೆ.
ವಿಡಿಯೋದಲ್ಲಿ ಅವರು ನೇರವಾಗಿ ಹಾಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿ ಶಂಕರ್ ಅವರ ವಿರುದ್ದ ಹರಿಹಾಯ್ದಿದ್ದು, ನಮ್ಮ ತೆರಿಗೆ ದುಡ್ಡನ್ನು ನಮಗೆ ಹಂಚುತ್ತಾರೆ. ಅವನು ಮನೆಯಿಂದ ತಂದು ನೀಡುವುದಿಲ್ಲ, ನೀವು ತಿನ್ನಿ, ತಿಂದು ಬಿಜೆಪಿಗೆ ಮತ ಹಾಕಿ ಅಂತ ಹೇಳಿದ್ದಾರೆ.
ಇದೇ ವೇಳೆ ಅವರು ಜೆಡಿಎಸ್ ನವರು ಕೌರವ ವಂಶಸ್ಥರು, ಅವರ ವಿರುದ್ದ ಯುದ್ದ ಮಾಡೋಣ. ಜೆಡಿಎಸ್ ನವರು ಯಾರೇ ಬಂದ್ರು ಊರಿನ ಒಳಗೆ ಬಿಡಬೇಡಿ, ನೀರಿನ ಕಳ್ಳ, ನೀರಿನ ಕಳ್ಳ ಅಂತ ಕೂಗಿ ದೊಣ್ಣೆ ಹಿಡಿದು ಕೊಂಡು ನಿಂತುಕೊಳ್ಳಿ. ನಾನು ಇರುವೆ, ನನಗೆ ಗೊತ್ತು ಅವರನ್ನು ಹೇಗೆ ಹೆದರಿಸಬೇಕು ಎಂದು.. ಎನ್ನುವ ಸುರೇಶ್ ಗೌಡರ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದವರು ಕಿಡಿಕಾರುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
