ಮಧುಗಿರಿ :
ಶಾಲೆಯಲ್ಲಿ ಹೇಳಿದ ಕೆಲಸ ಮಾಡಲಿಲ್ಲವೆಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಮನಸೋ ಇಚ್ಛೆ ಥಳಿಸಿರುವ ಘಟನೆ ತಾಲೂಕಿನ ಬ್ಯಾಲ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಬ್ಯಾಲ್ಯ ಗ್ರಾಮದ ಶ್ರೀನಿವಾಸ್ ಮತ್ತು ಸೌಮ್ಯರವರ ಮಗನಾದ ನಂದೀಶ್ ಶಿಕ್ಷಕಿಯ ಹೊಡೆತದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದು, ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾನೆ.
ನಂದೀಶ್ ಎಂಬ ಬಾಲಕ ಇಂಗ್ಲಿಂಷ್ ಪದ್ಯ ಹೇಳದಿದ್ದಾಗ ಕೋಪಗೊಂಡ ಶಿಕ್ಷಕಿ ಬಾಲಕನಿಗೆ ಬೆತ್ತದಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಾಲಕ ನಂದೀಶ್ ಮೇಲೆ ಬರೆಗಳು ಬಿದ್ದಿವೆ ಎಂದು ನಂದೀಶ್ ತಾಯಿ ಹೇಳಿದ್ದಾರೆ. ಶಿಕ್ಷಕಿ ಇದೇ ರೀತಿ ಹಲವು ವಿದ್ಯಾರ್ಥಿಗಳಿಗೆ ಥಳಿಸಿದ್ದಾರೆ ಎಂದು ಪಾಲಕರು ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ