ತುಮಕೂರು :
ನಗರ ಹೊರವಲಯದ ಬಿದರಕಟ್ಟೆಯ 240 ಎಕರೆ ವಿಶಾಲ ಪ್ರದೇಶದಲ್ಲಿ ತುಮಕೂರು ವಿವಿ ಕ್ಯಾಂಪಸ್ ತಲೆ ಎತ್ತುತ್ತಿದÀ್ದು, ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ನೂತನ ಕ್ಯಾಂಪಸ್ ಅನ್ನು ನಿರ್ಮಾಣ ಮಾಡಲಾಗುವುದು ಎಂದು ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ತಿಳಿಸಿದರು.
ತುಮಕೂರು ತಾಲೂಕಿನ ಬಿದರಕಟ್ಟೆಯಲ್ಲಿ ನೂತನ ಕ್ಯಾಂಪಸ್‍ನ ನಾಲ್ಕು ಪಿಜಿ ಹಾಸ್ಟೆಲ್ ಕಟ್ಟಡಗಳನ್ನು ಪರಿವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2016-17ರಲ್ಲಿ ಮಂಜೂರಾದ ಈ ಕ್ಯಾಂಪಸ್ ಜಾಗದಲ್ಲಿ ಸ್ನಾತಕೋತ್ತರ ಪದವಿಯ 32 ಶಾಖೆಗಳು ಒಟ್ಟಿಗೆ ಇರುವಂತೆ ಆಕಾಡೆಮಿಕ್ ಬ್ಲಾಕ್ ಅನ್ನು 36 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಮಾಡಲಾಗುತ್ತಿದೆ. ಕಲೆ, ವಿಜ್ಞಾನ, ತಂತ್ರಜ್ಞಾನವನ್ನು ಪ್ರತ್ಯೇಕ ಶಾಖೆಯಾಗಿ ಅಭ್ಯಸಿಸದರೆ ಒಂದಕ್ಕೊಂದು ಪೂರಕವಾಗಿ ಅಭ್ಯಸಿಸುವವ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಡಿ ಅಕಾಡೆಮಿಕ್ ಬ್ಲಾಕ್‍ಗಳು ನಿರ್ಮಾಣವಾಗುತ್ತಿದೆ ಎಂದರು.
4 ಹಾಸ್ಟೆಲ್, 4 ಪಿಜಿ ತರಗತಿಗಳು ಆರಂಭಕ್ಕೆ ತಯಾರಿ ಸಮಾಜ ಕಲ್ಯಾಣ ಇಲಾಖೆಯಿಂದ ದೊರೆತ 17.50 ಕೋಟಿ ಅನುದಾನದಲ್ಲಿ ಪ.ಜಾತಿ-ಪಂಗಡದ ವಿದ್ಯಾರ್ಥಿಗಳಿಗೆಂದೇ ನಾಲ್ಕು ಅಂತಸ್ತಿನ ಸ್ನಾತಕೋತ್ತರ ಪದವಿ ಮಹಿಳಾ, ಪುರುಷರ ಹಾಸ್ಟೆಲ್, ಸಂಶೋಧಾನಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಅನ್ನು ರೈಟ್ ಸಂಸ್ಥೆಯಿಂದ ನಿರ್ಮಿಸಲಾಗುತ್ತಿದ್ದು, ಇನ್ನೆರೆಡು ತಿಂಗಳಲ್ಲಿ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ರೂಸಾ ಅನುದಾನದಡಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಹಾಸ್ಟೆಲ್ ಕಟ್ಟಿದ್ದು, ಅಕಾಡೆಮಿಕ್ ಬ್ಲಾಕ್ ಕಟ್ಟಡ ನಿರ್ಮಾಣವಾಗುವವರೆಗೆ ಇದರಲ್ಲೇ ನಾಲ್ಕು ಸ್ನಾತಕೋತ್ತರ ತರಗತಿಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಸಮಾಜಕಾರ್ಯ ವಿಭಾಗ, ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ ಹಾಗೂ ಜೀವ ರಸಾಯನಶಾಸ್ತ್ರದ ಸ್ನಾತಕೋತ್ತರ ಪದವಿ ತರಗತಿಗಳು ಹೊಸ ಕ್ಯಾಂಪಸ್‍ನಲ್ಲಿ ಈ ವರ್ಷದಿಂದ ನಡೆಯಲಿವೆ. ವಿದ್ಯಾರ್ಥಿಗಳು ತುಮಕೂರಿನಿಂದ ಬರಲು ಅನುಕೂಲವಾಗುವಂತೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಹೊಸ ಕ್ಯಾಂಪಸ್ ಸಜ್ಜುಗೊಳಿಸಲು 280 ಕೋಟಿ ಅಗತ್ಯ, ಇದರೊಂದಿಗೆ ಕ್ಯಾಂಪಸ್‍ನಲ್ಲಿ ಪರೀಕ್ಷಾಪೂರ್ವ ತರಬೇತಿ ಕೇಂದ್ರ, ವಿಜ್ಞಾನ ಪ್ರಯೋಗಾಲಯ, ಕಲಾಭವನ ಕಾಮಗಾರಿಗಳು ನಡೆಯುತ್ತಿದ್ದು, 80 ಎಕರೆಯನ್ನು ವಿಜ್ಞಾನಾಧಾರಿತ ಚಟುವಟಿಕೆಗಳಿಗೆ ಮೀಸಲಿರಿಸಲಾಗಿದೆ. ಹೊಸ ಕ್ಯಾಂಪಸ್ ನಿರ್ಮಾಣಕ್ಕೆ 280 ಕೋಟಿ ಅಗತ್ಯವಿದ್ದು, ಕೇಂದ್ರ ಧನ ಸಹಾಯ ಆಯೋಗಕ್ಕೂ 400 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರಕಾರಕ್ಕೆ ಈ ಹಿಂದೆ ಸಲ್ಲಿಸಿದ್ದ 40 ಕೋಟಿ ಅನುದಾನವೂ ಬಿಡುಗಡೆಗೆ ಬಾಕಿಯಿದ್ದು. ಹಿಂದೆ ದೊರೆತ ಅನುದಾನ, ವಿವಿ ಸ್ವಂತ ಸಂಪನ್ಮೂಲದಡಿ ನೂತನ ಕ್ಯಾಂಪಸ್‍ನ್ನು ಚಾಲಗೊಳಿಸಲು ಪ್ರಯತ್ನಿಸಲಾಗಿದೆ. ಆಡಳಿತಾತ್ಮಕ ಕಟ್ಟಡ ನಿರ್ಮಾಣಕ್ಕೆ ಅನುದಾದನ ಕೊರತೆಯಿದೆ. ಇದೇ ಕ್ಯಾಂಪಸ್‍ನ 25 ಎಕರೆ ಪ್ರದೇಶವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಬೃಹತ್ ಕ್ರೀಡಾಂಗಣ ಅಭಿವೃದ್ಧಿಗೆ ಕೋರಿದ್ದು, ವಿವಿ ನೀಡಲು ಸಿದ್ಧವಿದೆ. ಹೊಸ ಕ್ಯಾಂಪಸ್ ಭವಿಷ್ಯದ ವಿದ್ಯಾರ್ಥಿಗಳಿಗೂ ಎಲ್ಲಾ ರೀತಿಯ ಕಲಿಕಾ ಚಟುವಟಿಕೆಗಳಿಗೂ ಪೂರಕವಾಗಬೇಕೆಂಬುದೇ ನನ್ನ ಆಶಯವಾಗಿದೆ ಎಂದರು.
ಗುಣಮಟ್ಟ ಪರಿಶೀಲನೆ ಕ್ಯಾಂಪಸ್ ಕಟ್ಟಡದ ಗುಣಮಟ್ಟದ ಪರಿವೀಕ್ಷಣೆಗೆ ತುಮಕೂರಿನ ಸಿದ್ಧಗಂಗಾ, ಸಿದ್ಧಾರ್ಥ ತಾಂತ್ರಿಕ ಕಾಲೇಜು ಹಾಗೂ ಪಿಡಬ್ಲ್ಯೂಡಿ ಎಂಜಿನಿಯರ್ ಮತ್ತು ವಿಶ್ವವಿದ್ಯಾಲಯ ತಾಂತ್ರಿಕ ಅಭಿಯಂತರರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ತಾವು ವಾರಕ್ಕೆ ಮೂರು ಬಾರಿ ಕ್ಯಾಂಪಸ್‍ಗೆ ಭೇಟಿ ಕೊಟ್ಟು ಪರಿಶೀಲಿಸುತ್ತಿದ್ದೇನೆ. ಗ್ರಾಮಾಂತರ ಭಾಗದ ಮಕ್ಕಳಿಗೆ ನೂತನ ಕ್ಯಾಂಪಸ್ ಪ್ರಯೋಜನಕಾರಿಯಾಗಬೇಕು ಎಂದರು. ಈ ವೇಳೆ ವಿವಿ ಸಹಪ್ರಾಧ್ಯಾಪಕರಾದ ಸಿಬಂತಿ ಪದ್ಮನಾಭ, ಡಾ.ವೆಂಕಟರೆಡ್ಡಿ, ಪೃಥ್ವಿ ಹಾಗೂ ಎಂಜಿನಿಯರ್‍ಗಳು, ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ನಾಲ್ಕು ಪಿಜಿ ತರಗತಿಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ನೂತನ ಕ್ಯಾಂಪಸ್‍ನಲ್ಲಿ ಆರಂಭಿಸಲು ನಿರ್ಧರಿಸಿದ್ದು, ನಾಲ್ಕು ಹಾಸ್ಟೆಲ್‍ಗಳ ಉದ್ಘಾಟನೆಗೆ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರನ್ನು ಆಹ್ವಾನಿಸಲು ಚಿಂತಿಸಲಾಗಿದೆ. ತುಮಕೂರು ವಿವಿಯ ಕ್ಯಾಂಪಸ್ ಕಲ್ಪನೆಯಂತೆ ಅನುಷ್ಟಾನಗೊಂಡರೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಲಗತ್ತಾಗಿ ಅಭಿವೃದ್ಧಿಹೊಂದಿದ ದೇಶದ ಮೊದಲ ಕ್ಯಾಂಪಸ್ ಎನಿಸಲಿದೆ.
-ಪ್ರೊ.ವೈ.ಎಸ್.ಸಿದ್ದೇಗೌಡ ಕುಲಪತಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ