ತುಮಕೂರು:

ಹೊಸ ವರ್ಷಾಚರಣೆ ವೇಳೆ ಲೂರ್ದ್ ಮಾತಾ ಚರ್ಚ್ನಲ್ಲಿ ಸಿಲಿಂಡರ್ ಸ್ಫೋಟಗೊಂಡು 7 ಮಂದಿ ಗಾಯಗೊಂಡಿದ್ದಾರೆ.
ಹೊಸ ವರ್ಷ ಸಂಭ್ರಮಾಚರಣೆ ವೇಳೆ ಈ ಅವಘಡ ಸಂಭವಿಸಿದ್ದು, ಬಿದಿರುಮೆಳೆ ತೋಟದ ಮರಿಯಾದಾಸ್, ಥಾಮಸ್, ಸುದೀಪ್ (13), ಕಿರಣಬಾಬು, ಅಂಟನಿ ಫ್ರಾನ್ಸಿಸ್, ರವಿ, ಶಾಂತಿನಗರ ಡಿಪೋ ನಿವಾಸಿ ಶಾಯಿದ್(12) ಗಾಯಾಳುಗಳು.
ಇನ್ನು ಕಿರಣಬಾಬು ಮತ್ತು ಮರಿಯಾದಾಸ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








