ತುಮಕೂರು : ನಾಮದ ಚಿಲುಮೆ-ಬಸದಿ ಬೆಟ್ಟ-ದೇವರಾಯನದುರ್ಗಕ್ಕಿಲ್ಲ ಪ್ರವೇಶ!!

 ತುಮಕೂರು :

      2021ರ ಹೊಸ ವರ್ಷಾಚರಣೆ ಸಮಯದಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯಲು ಹಾಗೂ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಡಿ. 31ರಂದು ಬೆಳಿಗ್ಗೆ 8 ರಿಂದ 2021 ಜನವರಿ 2ರ ಬೆಳಿಗ್ಗೆ 8 ರವರೆಗೆ ಜಿಲ್ಲೆಯ ನಾಮದ ಚಿಲುಮೆ, ಬಸದಿ ಬೆಟ್ಟ ಹಾಗೂ ದೇವರಾಯನದುರ್ಗ ಕ್ಷೇತ್ರಗಳಿಗೆ ಸಾರ್ವಜನಿಕರು/ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.

      ಸದರಿ ಸ್ಥಳಗಳಿಗೆ ತೆರಳುವ ಮಾರ್ಗಗಳಲ್ಲಿ ಮಾರ್ಗ ಮಧ್ಯೆ ರಸ್ತೆಯಲ್ಲಿ ವಾಹನ ನಿಲ್ಲಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ.ರಾಕೇಶ್‍ಕುಮಾರ್ ಅವರು ಆದೇಶಿಸಿದ್ದು, ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಆದೇಶಿಸಿದ್ದಾರೆ.

      ಜಿಲ್ಲೆಯ ಇತರ ಪ್ರವಾಸಿತಾಣಗಳಿಗೂ ನಿರ್ಬಂಧವಿಲ್ಲವೇಕೆ?:

      ಈ ಮೂರು ಪ್ರವಾಸಿತಾಣಗಳಿಗೆ ಮಾತ್ರವೇ ಪ್ರವೇಶ ನಿರ್ಬಂಧ ಮಾಡಿದರೆ ಸಾಕೆ? ಇವುಗಳ ಹೊರತಾಗಿ ಜಿಲ್ಲೆಯ ಸಿದ್ಧರಬೆಟ್ಟ, ಮಧುಗಿರಿ ಏಕಶಿಲಾ, ಪಾವಗಡ ನಿಡಗಲ್‍ಬೆಟ್ಟ, ತಿಪಟೂರಿನ ಹತ್ಯಾಳು ನರಸಿಂಹಸ್ವಾಮಿ ಬೆಟ್ಟ, ಕುಣಿಗಲ್ ಮಾರ್ಕೋನಹಳ್ಳಿ ಜಲಾಶಯ.., ಮೈದನಹಳ್ಳಿ.., ಹೀಗೆ ಹಲವು ಪ್ರವಾಸಿ ತಾಣಗಳಿದ್ದು, ಇಲ್ಲಿ ನಿಷೇಧವಿರುವುದರಿಂದ ಅಲ್ಲಿಗೆ ತೆರಳಿ ವಾತಾವರಣ ಕಲುಷಿತಗೊಳಿಸುವ ಸಾಧ್ಯತೆಯೂ ಹೆಚ್ಚಿರುವುದರಿಂದ ಕಾನೂನು ಸುವ್ಯವಸ್ಥೆ, ಕೊರೊನಾ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯೆಲ್ಲೆಡೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವೇಶನಿರ್ಬಂಧಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link