ತುರುವೇಕೆರೆ :
ತಾಲ್ಲೂಕಿನ ಗಡಿಭಾಗದ ಸಾದರಹಳ್ಳಿ ತೋಟವೊಂದರಲ್ಲಿ ಚಿರತೆಯೊಂದು ಸಾವನ್ನಪಿದೆ.
ಸಾದರಹಳ್ಳಿ ಗ್ರಾಮದ ಹುತ್ತದ ಸಿದ್ದಪ್ಪ ಅವರ ತೋಟದಲ್ಲಿ ಸುಮಾರು 18 ವರ್ಷದ ಗಂಡು ಚಿರತೆಯು ಮಂಗಳವಾರ ಬೆಳಗ್ಗೆ ಸತ್ತು ಊಬ್ಬಿದ ಸ್ಥಿತಿಯಲ್ಲಿ ಚಿರತೆಯ ಕಳೇಬರ ಪತ್ತೆಯಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯಾಧಿಕಾರಿ ಡಾ.ಚಂದ್ರು ಅವರು ಮೃತ ಚಿರತೆಯ ಕಳೇಬರ ಪರಿಶೀಲನೆ ನಡೆಸಿ ಸಹಜ ಸಾವಿನಿಂದ ಸತ್ತಿದೆ ಎಂದು ಅದರ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರವಿ, ಮಂಜುನಾಥ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ