ಬೆಂಗಳೂರು :
ಕರ್ನಾಟಕ ಹೈಕೋರ್ಟ್ ಸ್ಫೋಟಿಸೋದಾಗಿ ಬಂದಿದ್ದ ಬೆದರಿಕೆ ಪತ್ರ ಬರೆದಿದ್ದ ಕೇಸ್ಗೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.
ತನ್ನ ಹೆಂಡತಿಯನ್ನು ಮಾವ ಮನೆಗೆ ಕರೆದುಕೊಂಡು ಹೋದ ಅನ್ನೋ ಕಾರಣಕ್ಕೆ ಖತರ್ನಾಕ್ ಅಳಿಯನೇ ಮಾವನ ಹೆಸರಿನಲ್ಲಿ ಬಾಂಬ್ ಬೆದರಿಕೆ ಪತ್ರ ಬರೆದು ಸಿಕ್ಕಿಬಿದ್ದಿದ್ದಾನೆ.
ಬಂಧಿತ ವ್ಯಕ್ತಿ ಉತ್ತರ ಪ್ರದೇಶ ಮೂಲದ 36 ವರ್ಷದ ರಾಜೇಂದ್ರ ಸಿಂಗ್. ಈತನ ಮಾವ ಹರ್ ದರ್ಶನ್ ನಾಗಪಾಲ್ ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನು ತವರಿಗೆ ಕರೆದೊಯ್ದಿದ್ದಾರೆ. ಇದರಿಂದ ಕೋಪಗೊಂಡಿದ್ದ ರಾಜೇಂದ್ರ ಸಿಂಗ್, ಕಳೆದ ತಿಂಗಳು ಹರ್ ದರ್ಶನ್ ನಾಗಪಾಲ್ ಎಂಬ ಹೆಸರಲ್ಲಿ ತನ್ನ ಮಗನ ಜೊತೆಗೆ ಬಂದು ಕರ್ನಾಟಕ, ಮದ್ರಾಸ್ ಸೇರಿದಂತೆ 7 ಹೈಕೋರ್ಟ್ಗಳನ್ನು ಸೆಪ್ಟೆಂಬರ್ 30 ರಂದು ಸ್ಫೋಟಿಸೋದಾಗಿ ಪತ್ರದಲ್ಲಿ ಬೆದರಿಕೆ ಪತ್ರ ಬರೆದಿದ್ದ.
ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚೆನ್ನೈ ಪೊಲೀಸರು ರಾಜೇಂದ್ರ ಸಿಂಗ್ನನ್ನು ಬಂಧಿಸಿದ್ದು, ಇದೀಗ ಬಾಡಿ ವಾರೆಂಟ್ ಮೇಲೆ ರಾಜೇಂದ್ರ ಸಿಂಗ್ನನ್ನು ಕರೆ ತಂದು ವಿಧಾನಸೌಧ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ