ಉಗ್ರನ ಮಾಹಿತಿ : ರಾಮನಗರದಲ್ಲಿ 2 ಸಜೀವ ಬಾಂಬ್ ಪತ್ತೆ!!!

ಬೆಂಗಳೂರು:

       ಬಂಧಿತ ಉಗ್ರ ನೀಡಿದ ಮಾಹಿತಿ ಆಧಾರದಲ್ಲಿ ರಾಮನಗರದಲ್ಲಿ ಎರಡು ಸಜೀವ ಬಾಂಬ್‌ಗಳನ್ನು ಪತ್ತೆ ಹಚ್ಚಲಾಗಿದೆ ಎನ್ನಲಾಗಿದೆ.

      ನೆನ್ನೆ ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದ ಜೆಎಂಬಿ ಸಂಘಟನೆಯ ಶಂಕಿತ ಉಗ್ರ ಹಬೀಬುಲ್ಲಾ ರಹಮಾನ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ರಾಮನಗರ ಟಿಪ್ಪುನಗರದ 23ನೇ ವಾರ್ಡ್​ನ ಬ್ರಿಡ್ಜ್​ ಬಳಿ ಬಾಂಬ್​ಗಳನ್ನು ಇರಿಸಿದ್ದ ಸ್ಥಳದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಇನ್ನೂ ಹಲವು ಕಡೆ ಬಾಂಬ್ ಇರಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಎನ್‌ಐಎ, ಗುಪ್ತದಳ ಮತ್ತು ಪೊಲೀಸರಿಂದ ಪತ್ತೆ ಕಾರ್ಯಾಚರಣೆ ನಡೆದಿದೆ.

       ಸಿಐಡಿ ಕಚೇರಿಯಲ್ಲಿ ಎನ್​ಐಎ ತಂಡದಿಂದ ಉಗ್ರ ರೆಹಮಾನ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆತ ನೀಡಿದ ಮಾಹಿತಿ ಮೇರೆಗೆ ಎರಡು ಬಾಂಬ್​ಗಳನ್ನು ವಶಕ್ಕೆ ಪಡೆಯಲಾಗಿದೆ.

      ಇಂದು ಸಂಜೆ ಹಬೀಬುಲ್ಲಾ ರಹಮಾನ್​ನನ್ನು ಎನ್​ಐಎ ಪಶ್ಚಿಮ ಬಂಗಾಳಕ್ಕೆ ಕರೆದುಕೊಂಡು ಹೋಗಲಿದೆ. 2008ರಲ್ಲಿ ಬಿಹಾರದ ಬೌದ್ಧ ಗಯಾ ಸ್ಫೋಟ ಪ್ರಕರಣದಲ್ಲಿ ಈತನ ಪಾತ್ರ ಇತ್ತು. ಕಚ್ಚಾ ಬಾಂಬ್ ತಯಾರು ಮಾಡುವಲ್ಲಿ ಅಬೀಬುರ್ ಪರಿಣಿತಿ ಪಡೆದಿದ್ದಾನೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link