ವಿಜಯಪುರ :
ಕೃಷ್ಣಾ ನದಿ ಹಿನ್ನೀರಿನಲ್ಲಿ ಗುರುವಾರ ಸಂಜೆ ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮುಗಿಚಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರು ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ಗುರುವಾರ ಸಿದ್ದನಾಥ ತಾಂಡದ ಅಕ್ಷಯ ಲಮಾಣಿ, ಪರಶುರಾಮ ಲಮಾಣಿ ಹಾಗೂ ರಮೇಶ್ ಲಮಾಣಿ ಮೂವರು ಮೀನುಗಾರರು ಮೀನು ಹಿಡಿಯಲು ಸಿದ್ಧನಾಥ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪದಲ್ಲಿ ತೆರಳಿದ್ದರು.
ಸಂಜೆ ಭಾರಿ ಗಾಳಿ ಸಹಿತ ಮಳೆ ಸುರಿಯಲಾರಂಭಿಸಿದೆ. ಭಾರಿ ಗಾಳಿಯ ರಭಸಕ್ಕೆ ಇವರು ಮೀನು ಹಿಡಿಯುತ್ತಿದ್ದ ಬುಟ್ಟಿ(ತೆಪ್ಪ) ನದಿಯಲ್ಲಿ ಉರುಳಿ ಬಿದ್ದಿದೆ.
ಈ ವೇಳೆ ತೆಪ್ಪ ಮುಳುಗಿ ಮೂವರು ಪೈಕಿ ಒಬ್ಬರು ಈಜಿ ದಡ ಸೇರಿದ್ದರು. ಪರಶುರಾಮ ಲಮಾಣಿ ಹಾಗೂ ರಮೇಶ್ ಲಮಾಣಿ ಇಂದು ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಬಳಿಯ ನದಿ ದಡದಲ್ಲಿ ಶವಗಳು ಪತ್ತೆಯಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ