ಬಳ್ಳಾರಿ:
ಒಂದು ಕಾಲದಲ್ಲಿ ಎಣ್ಣೆ ಸಿಕೆಕಾಯಿ ರೀತಿಯಿದ್ದ ಕಾಂಗ್ರೇಸ್ ನ ಇಬ್ಬರು ಶಾಸಕರು ಈಗ ಹಾಲು ಜೇನಿನಂತಾಗಿದ್ದಾರೆ ಎಂದು ವರದಿ ಬಂದಿದೆ ಇಷ್ಟಕ್ಕೂ ಆ ಇಬ್ಬರು ಶಾಸಕರು ಯಾರು???
ಅವರೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಮತ್ತು ಆನಂದ್ ಸಿಂಗ್ ಭೀಮಾನಾಯಕ್ ವಿರುದ್ಧ ಪರ್ಯಾಯ ವ್ಯಕ್ತಿ ಬೆಳೆಸುವ ಉದ್ದೇಶದಿಂದ ಭೀಮಾನಾಯ್ಕ ಶಾಸಕರಾಗಿರುವ ಹಗರಿಬೊಮ್ಮನಹಳ್ಳಿಯಲ್ಲಿ ಕಚೇರಿ ತೆರೆದು ರಾಜಕೀಯ ಚಟುವಟಿಕೆಯನ್ನು ಆರಂಭಿಸಿದ್ದ ಶಾಸಕ ಆನಂದ ಸಿಂಗ್ ಇದೀಗ ಕಚೇರಿ ತೆರವುಗೊಳಿಸಿದ್ದಾರೆ ೆಂದು ತಿಳಿದು ಬಂದಿದೆ .
ಈಚೆಗೆ ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಹಲ್ಲೆ ಪ್ರಕರಣದ ಬಳಿಕ ಆನಂದ ಸಿಂಗ್ ಈ ನಿರ್ಧಾರಕ್ಕೆ ಬಂದಿದ್ದು, ಸಿಂಗ್ ಹಾಗೂ ಭೀಮಾನಾಯ್ಕ ನಡುವಿನ ಸಂಧಾನ ಯಶಸ್ವಿಯಾದಂತಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿದ್ದ ಕಚೇರಿ ಹಾಗೂ ಆನಂದ ಸಿಂಗ್ ಅವರ ಬೃಹತ್ ಕಟೌಟ್ ಸಹ ತೆರವುಗೊಳಿಸಲಾಗಿದ್ದು ಇದರಿಂದ ಇಬ್ಬರ ನಡುವಿನ ಮುಸುಕಿನ ಗುದ್ದಾಟಕ್ಕೆ ತೆರೆ ಬಿದ್ದಂತಾಗಿದೆ ಎಂದು ಬಳ್ಳಾರಿ ಕಾಂಗ್ರೇಸ್ ನಿಟ್ಟುಸಿರು ಬಿಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ