ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧ!!

ಚಿಕ್ಕಮಗಳೂರು:

      ಚಾರ್ಮಾಡಿ ಘಾಟ್ ನಲ್ಲಿ ರಾತ್ರಿ ವೇಳೆ ವಾಹನ ಸಂಚಾರವನ್ನು ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎಂ ರಮೇಶ್ ಆದೇಶ ಹೊರಡಿಸಿದ್ದಾರೆ.

      ಭಾರೀ ಮಳೆಯಿಂದಾಗಿ ರಸ್ತೆಗೆ ಮರಗಳು ಉರುಳುತ್ತಿದ್ದು, ಭೂಕುಸಿತವಾಗುವ ಸಾಧ್ಯತೆ ಹಿನ್ನಲೆಯಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಲಾಗಿದ್ದು,  ಶಿರಾಡಿಘಾಟ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಾಹನಗಳು ಚಾರ್ಮಾಡಿ ಘಾಟ್ ಮೂಲಕ ಸಂಚರಿಸುತ್ತಿವೆ.  

Heavy rainfall in coastal Karnataka trigerred landslide

      ಬುಲೆಟ್ ಟ್ಯಾಂಕರ್ಸ್, ಫಿಶ್ ಕಾರ್ಗೋ ಕಂಟೈನರ್ಸ್ ಹಾಗೂ ಲಾಂಗ್ ಚಾರ್ಸಿಸ್ ವಾಹನಗಳು, ಹೇವಿ ಕಮರ್ಷಿಯಲ್ ವಾಹನಗಳು, ಮಲ್ಟಿ ಎಕ್ಸೆಲ್, ಟ್ರಕ್ ಟ್ರೈಲರ್, ಕೆಎಸ್‍ಆರ್‍ಟಿಸಿ ರಾಜಹಂಸ ಬಸ್‍ಗಳು ಮತ್ತು ಎಲ್ಲಾಬಗೆಯ ಅಧಿಕ ಬಾರದ ಸರಕು ಸಾಗಾಣಿಕೆ ವಾಹನಗಳನ್ನು ದಿನದ 24 ಗಂಟೆಯು ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. 

    ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಆಂಬುಲೆನ್ಸ್ ವಾಹನಗಳಿಗೆ ಮಾತ್ರ ಈ ಆದೇಶದಿಂದ ವಿನಾಯಿತಿ ನೀಡಿದ್ದು, ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link