ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿ ಯವರಿಂದ ಬಹಳ ನಿರೀಕ್ಷೆ ಮಾಡಿದ್ದೆವು. ಅದರೆ ನಮಗಂತೂ ಮೋದಿ ಭಾಷಣ ನಿರಾಸೆ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮಂದಿನ ತಿಂಗಳ ಮೇ 3 ವರೆಗೆ ಲಾಕ್ ಡೌನ್ ಮುಂದುವರೆಸುವುದಾಗಿ ಹೇಳಿದ್ದಾರೆ , ಆದರೆ ಬಡವರು, ಕೃಷಿ ಕಾರ್ಮಿಕರು ರೈತರು ಏನು ಮಾಡಬೇಕು ಅವರ ಕಷ್ಟ ಪರಿಹಾರ ಹೇಗೆ ಎಂಬ ಬಗ್ಗೆ ಮೌನವವಹಿರುವುದು ನಿಜಕ್ಕೂ ನಿರಾಸೆ ತಂದಿದೆ ಎಂದರು .
ಪ್ರಧಾನಿಯವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಲಾಕ್ ಡೌನ್ ಜಾರಿಗೆ . ನಾವು ಸಂಪೂರ್ಣ ಸಹಕಾರ ಕೊಡುತ್ತೇವೆ. ಆದರೆ ದೇಶದ ಹಿತಕ್ಕಾಗಿ ಅವರದ್ದೇ ಆದ ರೀತಿಯ ಸಂದೇಶ ನೀಡಿದ್ದಾರೆ.
ಹಲವು ವರ್ಗಕ್ಕೆ ರಿಯಾಯಿತಿ ಕೊಡ್ತಾರೆ ಅಂದುಕೊಂಡಿದ್ದೆವು. ಕಾರ್ಮಿಕರು ಮತ್ತು ಉದ್ಯಮಿಗಳು ಮತ್ತು ರೈತರಿಗೆ ವಿನಾಯತಿ ಕೊಡುವುದರಲ್ಲಿ ಅವರು ಎಡವಿದ್ದಾರೆ . ಇದರ ಬಗ್ಗೆ ಏನು ಹೇಳಿಲ್ಲ. ನಾವು ಸಹಕಾರ ಕೊಡಲು ಸಿದ್ದ ಆದರೆ ಯಾವುದೇ ವಿನಾಯಿತಿ ಪ್ರಕಟ ಮಾಡದಿದಿರುವುದು ಬೇಸರ ತಂದಿದೆ ಎಂದರು.
ವೈದ್ಯರಿಗೆ ಒಳ್ಳೆಯ ಕಿಟ್ ಕೊಡುತ್ತಿಲ್ಲ. ಬೇರೆ ಬೇರೆ ದೇಶಗಳಲ್ಲಿ ಒಳ್ಳೆಯ ಕಿಟ್ ಕೊಟ್ಟಿದ್ದಾರೆ. ವೈದ್ಯರು, ಪೆÇಲೀಸರು, ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಕಿಟ್ ಕೊಡಬೇಕು, ಬ್ಯಾಂಕುಗಳಿಗೆ ಯಾವ ನಿರ್ದೇಶನ, ಸುತ್ತೋಲೆ ಸಹ ಹೋಗಿಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ