ಕೋಲಾರ :
ಶಾಲೆಯಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆಯೊಂದು ಜಿಲ್ಲೆಯ ಬೇತಮಂಗಲ ತಾಲೂಕಿನ ವಿಮಲ ರುದ್ರಯ್ಯ ಶಾಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬೇತಮಂಗಲ ತಾಲೂಕಿನ ಹತ್ತಿರದ ವಿಮಲ ರುದ್ರಯ್ಯ ಶಾಲೆಯಲ್ಲಿ ನಾಳೆ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಇಂತಹ ಶಾಲಾ ವಾರ್ಷಿಕೋತ್ಸವಕ್ಕೆ ವಿದ್ಯಾರ್ಥಿಗಳಿಂದ ಕಳೆದ ಎರಡು-ಮೂರು ದಿನಗಳಿಂದ ಡ್ಯಾನ್ಸ್ ಸೇರಿದಂತೆ ವಿವಿಧ ತಯಾರಿ ಕೂಡ ನಡೆದಿತ್ತು. ಇಂದು ಕೂಡ 9ನೇ ತರಗತಿಯ ವಿದ್ಯಾರ್ಥಿನಿಯರು ಶಾಲಾ ವಾರ್ಷಿಕೋತ್ಸವದ ನಿಮಿತ್ತ ಡ್ಯಾನ್ಸ್ ಪ್ರಾಕ್ಟೀಸ್ ನಲ್ಲಿ ತೊಡಗಿದ್ದರು. ಈ ವೇಳೆ ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿನಿ ಪೂಜಿತಾ ಡ್ಯಾನ್ಸ್ ಮಾಡುತ್ತ ಇರುವಾಗ ಹೃದಯ ಸ್ತಂಭನ ಉಂಟಾಗಿದೆ. ಹೀಗಾಗಿ ಡ್ಯಾನ್ಸ್ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ.
ನಂತರ ಆಕೆಯನ್ನು ಹತ್ತು ನಿಮಿಷದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವಿದ್ಯಾರ್ಥಿನಿ ಬಿದ್ದ ತಕ್ಷಣವೇ ಸಾವನ್ನಪ್ಪಿರುವುದಾಗಿ ಸಂಬಂಧಿಗಳು ದೂರಿದ್ದಾರೆ. ವೈದ್ಯರು, ಹೃದಯ ಸ್ತಂಭನವಾಗಿ ಆಕೆ ಬಿದ್ದು ಸಾವನ್ನಪ್ಪಿರಬಹುದು ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ