ಚೆನ್ನೈ :
ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ಅವರು ಸಂಪೂರ್ಣ ಗುಣಮುಖರಾದ ಕಾರಣ ಇಂದು ಮಠಕ್ಕೆ ವಾಪಸಾಗುತ್ತಿದ್ದಾರೆ.
ಚೆನ್ನೈನಿಂದ ವಿಶೇಷ ಏರ್ ಅಂಬುಲೆನ್ಸ್ನಲ್ಲಿ ಎಚ್ಎಎಲ್ ವಿಮಾನಕ್ಕೆ ಕರೆತಂದು ಝಿರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಠಕ್ಕೆ ಕರೆದೊಯ್ಯಲಾಗುತ್ತಿದೆ.
ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಶ್ರೀಗಳಿಗೆ ಇನ್ನೂ 15 ರಿಂದ 20 ದಿನಗಳ ಕಾಲ ಹೆಚ್ಚಿನ ವಿಶ್ರಾಂತಿ ನೀಡಬೇಕಾಗಿದೆ.
ಮಠದಲ್ಲಿ ದರ್ಶನವಿಲ್ಲ :
ಮಠಕ್ಕೆ ಭಕ್ತರು ಬಂದರೂ ಶ್ರೀಗಳ ದರ್ಶನಕ್ಕೆ ಅವಕಾಶ ನೀಡಲು ಕಷ್ಟವಾಗುತ್ತದೆ ಎಂದು ಕಿರಿಯ ಶ್ರೀಗಳು ಹೇಳಿದ್ದಾರೆ. 10 ರಿಂದ 20 ದಿನಗಳ ಕಾಲ ಶ್ರೀಗಳಿಗೆ ಸಂಪೂರ್ಣ ವಿಶ್ರಾಂತಿ ಬೇಕಾಗಿರುವ ಕಾರಣ ಅವರ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








