ಕದಂಬ ನೌಕಾನೆಲೆಗೂ ತಟ್ಟಿದ ಜಲಕ್ಷಾಮದ ಬಿಸಿ..!!!

ಕಾರವಾರ:
 
       ಜಲಕ್ಷಾಮ ದಿನದಿಂದ ರಾಜ್ಯಾದ್ಯಂತ ದಿನೇ ದಿನೆ ಜಲಕ್ಷಾಮ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಇದೀಗ ಇದರ ಬಿಸಿ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆಯಾದ ಕಾರವಾರದ ಕದಂಬ ನೌಕಾನೆಲೆಗೂ ಸಹ ತಟ್ಟಿದೆ.
     ಜಲಕ್ಷಾಮದ ಕಾರಣದಿಂದ , ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳ ನೀರಿನ ಅವಶ್ಯಕತೆಗಳನ್ನು ಪೂರೈಸುವುದು ಅಧಿಕಾರಿಗಳ ಪಾಲಿಗೆ ಸವಾಲಾಗಿದೆ. ಇದಕ್ಕಾಗಿ ಅವರು ಕೆಲವು,ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳನ್ನು ಮುಂಬೈಗೆ ಸ್ಥಳಾಂತರಿಸಲು ಯೋಚನೆಯಲ್ಲಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾರವಾರದ ನೌಕಾನೆಲೆ ಇಂತಹಾ ಪರಿಸ್ಥಿತಿ ಎದುರಾಗಿದೆ.
    ದೇಶದ ಹೆಮ್ಮೆಯ ವಿಮಾನ ವಾಹಕ ಯುದ್ಧ ನೌಕೆಯಾದ ಐ ಎನ್ ಎಸ್ ವಿಕ್ರಮಾದಿತ್ಯ ಸೇರಿದಂತೆ ಇನ್ನುಇತರೆ ಯುದ್ಧ ನೌಕೆಗಳು, ಸಬ್ ಮೆರಿನ್‍ಗಳು ಇಲ್ಲಿವೆ. ಅವುಗಳ ನಿರ್ವಹಣೆಗೆ  ದಿನ ಒಂದಕ್ಕೆ  ಆರು ಮಿಲಿಯನ್ ಲೀಟರ್ ನೀರಿನ ಅವಶ್ಯಕತೆ ಇದೆ. ಅಲ್ಲದೆ ಇಲ್ಲಿನ ನಿವಾಸಿಗಳು, ಮನೆಬಳಕೆಗಾಗಿಯೂ ನೀರಿನ ಅಗತ್ಯವಿದೆ. ಈಗ ಸದ್ಯ ಕೇವಲ ಒಂದು ಮಿಲಿಯನ್ ಲೀಟರ್ ನೀರು ಸರಬರಾಜಾಗುತ್ತಿದೆ.
    ನೌಕಾದಳದ ಮೂಲಗಳ ಪ್ರಕಾರ ನೀರಿನ ಸಮಸ್ಯೆ ತೀವ್ರವಾಗಿದ್ದು ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಕಳೆದ ವಾರ ಐಎನ್ಎಸ್ ದೀಪಕ್, ಫ್ಲೀಟ್ ಟ್ಯಾಂಕರ್, ಮುಂಬೈನಿಂದ ಕಾರವಾರ ನೆಲೆಗೆ ನೀರನ್ನು ತಂದಿದ್ದವು.
    ಸದ್ಯ ನೌಕಾನೆಲೆಯಲ್ಲಿರುವ ಹಡಗು ಮತ್ತು ಜಲಾಂತರ್ಗಾಮಿಗಳ ಸುರಕ್ಷಾ ದೃಷ್ಠಿಯಿಂದ ಸಾವಿರಾರು ಲೀಟರ್ ನೀರಿನ ಅಗತ್ಯವಿದ್ದು. ಇದೀಗ ಮುಂದಿನ 4-5 ದಿನಗಳಿಗಾಗುವಷ್ಟು ಮಾತ್ರ ನೀರಿನ ಸಂಗ್ರಹವಿದೆ. ಒಂದೊಮ್ಮೆ ಮಳೆ ವಿಳಂಬವಾದಲ್ಲಿ ನೀರು ಸರಬರಾಜು ಆರಂಭವಾಗದಿದ್ದಲ್ಲಿ ಅರ್ಧಕ್ಕಿಂತಲೂ ಹೆಚ್ಚು ಹಡಗುಗಳನ್ನು ಮುಂಬೈಗೆ ವರ್ಗಾಯಿಸುವುದು ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap