ರಾಮನಗರ : ವಿದ್ಯುತ್ ಸ್ಪರ್ಶಿಸಿ ಆಹಾರ ಹುಡುಕಿ ಬಂದ ಕಾಡಾನೆ ಸಾವು!!

ರಾಮನಗರ  : 

      ಆಹಾರ ಹುಡುಕಿ ಗ್ರಾಮದೊಳಗೆ ಬಂದ ಗಂಡು ಕಾಡಾನೆಯೊಂದು ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿರುವ ಘಟನೆ ರಾಮನಗರದ ತುಂಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

      ಗ್ರಾಮದಲ್ಲಿ ತಡರಾತ್ರಿ ಆಹಾರವನ್ನು ಹುಡುಕುತ್ತಾ ಕಾಡಾನೆ ಬಂದ ವೇಳೆ ಮಲ್ಲಯ್ಯ ಎಂಬುವವರ ಜಮೀನಿನಲ್ಲಿ  ಟ್ರಾನ್ಸ್​​ಫಾರ್ಮರ್ ಮೂಲಕ ವಿದ್ಯುತ್ ಪ್ರವಹಿಸಿ ಗಂಡಾನೆ ಮೃತಪಟ್ಟಿದೆ.

      ಆನೆಗಳು ಹೊಲದಲ್ಲಿರುವ ಟೋಮ್ಯಾಟೋ, ಬಾಳೆ ಬೆಳೆಗಳನ್ನು ನಾಶ ಮಾಡುತ್ತಿದೆ. ಈ ಬಗ್ಗೆ ಎಷ್ಟು ದೂರು ನೀಡಿದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದಾರೆ.

     ಅರಣ್ಯಾಧಿಕಾರಿಗಳು ಆನೆ ಸತ್ತು ಹೋಗಿರುವ ಸ್ಥಳಕ್ಕೆ ಭೇಟಿ ನೀಡಿ, ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಸ್ಥಳದಲ್ಲೆ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link