40 ಸಾವಿರದಿಂದ 20 ಸಾವಿರಕ್ಕೆ ಇಳಿಕೆಯಾದ ವಿತ್ ಡ್ರಾ ಮಿತಿ..!

ನವದೆಹಲಿ:

      ಇನ್ನುಮುಂದೆ ಎಟಿಎಂ ಡೆಬಿಟ್ ಕಾರ್ಡ್ ಬಳಕೆದಾರರು ಹೆಚ್ಚು ಹಣವನ್ನು ವಿತ್ ಡ್ರಾ ಮಾಡುವಂತಿಲ್ಲ! ದಿನಕ್ಕೆ ಕೇವಲ ರೂ. 20 ಸಾವಿರಗಳನ್ನು ಮಾತ್ರ ವಿತ್ ಡ್ರಾ ಮಾಡಬಹುದು ಎಂದು ತಿಳಿಸಿರುವ ಎಸ್.ಬಿ.ಐ. ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.

      ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ ಮೇಲಿಂದ ಮೇಲೆ ಅನೇಕ ನಿಯಮಗಳನ್ನು ಜಾರಿಗೆ ತರುವುದು ಅಥವಾ ಬದಲಾಯಿಸುವುದು ಮಾಡುತ್ತಾ ಬಂದಿದ್ದು, ಈಗ 40 ಸಾವಿರ ಇದ್ದ ವಿತ್ ಡ್ರಾ ಮಿತಿಯನ್ನು 20 ಸಾವಿರಕ್ಕೆ ಇಳಿಸಿದೆ. ಈ ನೂತನ ನಿಯಮ ಅಕ್ಟೋಬರ್ 31 ರಿಂದ ನಿಯಮ ಜಾರಿಗೆ ಬರಲಿದೆ.

ನಿಯಮ ಜಾರಿಗೆ ಕಾರಣ :

      ದೇಶದಲ್ಲಿ ಹೆಚ್ಚಾಗುತ್ತಿರುವ ವಂಚನಾ ಪ್ರಕರಣಗಳನ್ನು ತಡೆಗಟ್ಟಲು ಹಾಗೂ ಡಿಜಿಟಲ್ ಪೇಮೆಂಟ್ ಅನ್ನು ಉತ್ತೇಜಿನ ಮಾಡಲು ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಹಕರ ಆಕ್ರೋಶ:

      ಎಸ್ಬಿಐ ಜಾರಿಗೊಳಿಸುತ್ತಿರುವ ಈ ನಿಯಮಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ನಿಯಮಗಳಿಂದ ತುರ್ತು ಸಂದರ್ಭಗಳಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಏಕೆಂದರೆ ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಹಣದ ಅವಶ್ಯಕತೆಯಿರುತ್ತದೆ. ಸಾರ್ವಜನಿಕರ ತೊಂದರೆ ಆಗದ ರೀತಿಯಲ್ಲಿ ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಅವಕಾಶ ಕಲ್ಪಿಸಬೇಕು. ಹಿಂದಿನಂತೆ ರೂ. 40 ಸಾವಿರ ನಿಗದಿ ಮಾಡಲು ಒತ್ತಾಯಿಸಲಾಗುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link