ಮಧುಗಿರಿ :
ತುಮಕೂರು-ಕೋಡಿಗೇನಹಳ್ಳಿ ಮಾರ್ಗವಾಗಿ ಸಾಗುವ ಮಾರುತಿ ಕೃಪ ಬಸ್ ನಲ್ಲಿ ಹೃದ್ರೋಗದಿಂದ ಅಪರಿಚಿತ ಮಹಿಳೆಯೊಬ್ಬರು ಸಾವನ್ನಪ್ಪಿರುವ ದುರ್ಘಟನೆ ಬುಧವಾರ ಸಂಭವಿಸಿದೆ.
ಪಟ್ಟಣದ ಸಿವಿಲ್ ಬಸ್ಟಾಂಡ್ ಗೆ ಬಂದ ಮಾರುತಿ ಕೃಪ ಬಸ್(ಕೆಎ 06 ಬಿ 4459) ಹತ್ತಿದ್ದ ಸುಮಾರು 60 ವರ್ಷದ ಅಪರಿಚಿತ ಮಹಿಳೆ ಬಸ್ ಸೀಟ್ ನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮಹಿಳೆಗೆ ಹೃದಯಾಘಾತವಾಗಿ ಸಾವು ಸಂಭವಿಸಿರಬಹುದು ಎಂದು ಊಹಿಸಲಾಗಿದೆ.
ಇನ್ನು ಮೃತಪಟ್ಟ ಮಹಿಳೆಯ ಬಗ್ಗೆ ಗುರುತು ಪತ್ತೆಯಾಗಿಲ್ಲ. ಈ ಕಾರಣ ಸಂಬಂಧಪಟ್ಟವರು ಮಧುಗಿರಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಸ್ಥಳಕ್ಕೆ ಸಿಪಿಐ ದಯಾನಂದ ಸೇಗುಣಿಸಿ, ಪಿಎಸ್ಐ ಮಂಗಳಗೌರಮ್ಮ ಮತ್ತಿತರರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
