ವಿಜಯಪುರ :
40 ವರ್ಷದ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಘಟನೆಯೊಂದು ವಿಜಯಪುರ ನಗರದ ಮುದನೂರು ಆಸ್ಪತ್ರೆಯಲ್ಲಿ ನಡೆದಿದೆ.
ವಿಜಯಪುರ ನಗರದ ರಾಜ್ ರತನ್ ಕಾಲೋನಿ ನಿವಾಸಿಯಾಗಿರುವ ದಾಲಿಬಾಯಿ ಎಂಬುವರೇ 4 ಮಕ್ಕಳಿಗೆ ಜನ್ಮ ನೀಡಿ ತಾಯಿಯಾಗಿರುವ ಮಹಿಳೆ.
ಮೂಲತಃ ರಾಜಸ್ತಾನದವರಾಗಿರುವ ದಂಪತಿಗೆ 4 ವರ್ಷದ ವಿಶೇಷಚೇತನ ಹೆಣ್ಣು ಮಗುವಿತ್ತು. ಆದರೆ ದಂಪತಿ ಗಂಡು ಮಗುವಿನ ಆಸೆ ಹೊತ್ತಿದ್ದರೂ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ದಂಪತಿಗಳು ಬೆಂಗಳೂರಿಗೆ ತೆರಳಿ ಬಂಜೆ ನಿವಾರಣಾ ಚಿಕಿತ್ಸೆ ಮಾಡಿಸಿದ್ದರು. ಅದಕ್ಕಾಗಿ ಮಹಿಳೆ ಪ್ರಣಾಳ ಶಿಶು ಚಿಕಿತ್ಸೆಗೊಳಪಟ್ಟಿದ್ದರು. ಬಳಿಕ ಗರ್ಭ ಧರಿಸಿದ ಮಹಿಳೆ ಶುಕ್ರವಾರ ಬೆಳಗ್ಗೆ ತಪಾಸಣೆಗೆಂದು ಆಗಮಿಸಿದಾಗ ವೈದ್ಯರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ಗೆ ಒಳಡಪಡಿಸಿದಾಗ ಮಹಿಳೆಯ ಗರ್ಭದಲ್ಲಿ ನಾಲ್ಕು ಶಿಶುಗಳಿರುವನ್ನು ಪತ್ತೆ ಹೆಚ್ಚಿದರು.
ಜನಿಸಿದ ನಾಲ್ಕು ಮಕ್ಕಳು ತಲಾ ಒಂದೂವರೆ ಕಿಲೋ ಗ್ರಾಂ ತೂಗುತ್ತಿದ್ದು, ಈ ಮಕ್ಕಳಲ್ಲಿ 2 ಗಂಡು,2 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಅಲ್ಲದೆ ತಾಯಿ ಹಾಗೂ ನಾಲ್ಕು ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
