ಚಿಕ್ಕಬಳ್ಳಾಪುರ:
ನಗರದಲ್ಲಿ ಮೃತಪಟ್ಟ ಕೊರೊನಾ ಸೋಂಕಿತನ ಬಳಿ ದಿನಸಿ ಪಡೆದಿದ್ದ ಮಹಿಳೆ ಕೊರೊನಾ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.
ಹೌದು, ನಗರದ 65 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಬಲಿಯಾಗುವ ಮುನ್ನ ಈ ಏರಿಯಾದಲ್ಲಿ ಉಚಿತವಾಗಿ ದಿನಸಿ ಕಿಟ್ ವಿತರಣೆ ಮಾಡಿದ್ದರು. ಮಾರ್ಚ್ 5 ರಂದು ಸೋಂಕಿಗೆ ಬಲಿಯಾದ ರೋಗಿ -250 ಮನೆಗೆ ತೆರಳಿ ಮಹಿಳೆ ದಿನಸಿ ಕಿಟ್ ಪಡೆದುಕೊಂಡಿದ್ದಳು. ಇದೀಗ ಈ ಮಹಿಳೆಗೂ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಸೋಂಕಿತೆ ರೇಷ್ಮೆ ನೂಲಿನ ಕಾರ್ಖಾನೆಯಲ್ಲಿ ರೇಷ್ಮೆ ನೂಲು ಬಿಡಿಸುವ ಕೆಲಸ ಮಾಡುತ್ತಿದ್ದು, ರೇಷ್ಮೆ ನೂಲು ಕಾರ್ಖಾನೆಯ ಮಾಲೀಕ, ಮಾಲೀಕನ ಹೆಂಡತಿ, ಮಕ್ಕಳು, ಕಾರ್ಖಾನೆಯಲ್ಲಿ ಕೆಲಸ ಮಾಡುವ 6 ಮಂದಿ ಕಾರ್ಮಿಕರು, ಸೋಂಕಿತೆಯ ಅಕ್ಕ, ಭಾವ ಹಾಗೂ ಮಕ್ಕಳು ಸೇರಿದಂತೆ ಒಟ್ಟು 22 ಮಂದಿಯನ್ನು ಪ್ರಥಮ ಸಂಪರ್ಕಿತರೆಂದು ಗುರುತಿಸಲಾಗಿದ್ದು, ಇವರೆಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಈ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, ಇನ್ನು ಮೃತ ಸೋಂಕಿತನ ಬಳಿ ದಿನಸಿ ಪಡೆದ ಚಿಕ್ಕಬಳ್ಳಾಪುರ ನಗರದ 17, 13, 12 ಮತ್ತು 14 ನೇ ವಾರ್ಡ್ ಸೇರಿ ನೂರಾರು ಮಂದಿಗೆ ಈಗ ಕೊರೊನಾ ಹರಡುವ ಆತಂಕ ಶುರುವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ