ಬೆಂಗಳೂರು :
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 23ರಿಂದ ಯೂಟ್ಯೂಬ್ ಮೂಲಕ ಆನ್‌ಲೈನ್ ತರಗತಿ (ಪೂರ್ವ ಮುದ್ರಿತ ವಿಡಿಯೋ) ಆರಂಭವಾಗಲಿದೆ.
ವಿದ್ಯಾರ್ಥಿಗಳು https://www.youtube.com/c/dpuedkpucpa ಲಿಂಕ್ ಮೂಲಕ ಆನ್‌ಲೈನ್ ತರಗತಿಯನ್ನು ವೀಕ್ಷಿಸಬಹುದು ಎಂದು ಪಿಯು ಇಲಾಖೆಯ ನಿರ್ದೇಶಕಿ ಕನಕವಲ್ಲಿ ಮಾಹಿತಿ ನೀಡಿದ್ದಾರೆ.
ದ್ವಿತೀಯ ಪಿಯು ಯೂಟ್ಯೂಬ್ ತರಗತಿಯ ವೇಳಾಪಟ್ಟಿ:
- ಜುಲೈ 23: ಭೌತಶಾಸ್ತ್ರ / ಅಕೌಂಟೆನ್ಸಿ ಭೌತಶಾಸ್ತ್ರ / ಅಕೌಂಟೆನ್ಸಿ (ನೋಟ್ಸ್) ರಸಾಯನಶಾಸ್ತ್ರ / ರಾಜ್ಯಶಾಸ್ತ್ರ ರಸಾಯನಶಾಸ್ತ್ರ / ರಾಜ್ಯಶಾಸ್ತ್ರ (ನೋಟ್ಸ್)
- ಜುಲೈ 24: ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್ ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್ (ನೋಟ್ಸ್) ಗಣಿತ / ಅರ್ಥಶಾಸ್ತ್ರ ಗಣಿತ / ಅರ್ಥಶಾಸ್ತ್ರ (ನೋಟ್ಸ್)
- ಜುಲೈ 25: ಗಣಿತ /ಇತಿಹಾಸ ಗಣಿತ/ಇತಿಹಾಸ (ನೋಟ್ಸ್) ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್
- ಜುಲೈ 27: ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್ ಕಂಪ್ಯೂಟರ್ ಸೈನ್ಸ್/ ಸಮಾಜಶಾಸ್ತ್ರ ನೋಟ್ಸ್
- ಜುಲೈ 28: ಬೇಸಿಕ್ ಮ್ಯಾಥ್ಸ್/ ಸಮಾಜಶಾಸ್ತ್ರ ನೋಟ್ಸ್ ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್
- ಜುಲೈ 29: ಇಂಗ್ಲಿಷ್ ನೋಟ್ಸ್ ಕನ್ನಡ/ಹಿಂದಿ/ಸಂಸ್ಕೃತ ನೋಟ್ಸ್
- ಜು.30: ಭೌತಶಾಸ್ತ್ರ/ಅಕೌಂಟೆನ್ಸಿ ನೋಟ್ಸ್ ರಸಾಯನಶಾಸ್ತ್ರ/ರಾಜ್ಯಶಾಸ್ತ್ರ ನೋಟ್ಸ್
- ಜುಲೈ 31: ಜೀವಶಾಸ್ತ್ರ/ಬಿಸಿನೆಸ್ ಸ್ಟಡೀಸ್ ನೋಟ್ಸ್ ಗಣಿತ/ಅರ್ಥಶಾಸ್ತ್ರ ನೋಟ್ಸ್
- ಆಗಸ್ಟ್ 1: ಗಣಿತ/ಇತಿಹಾಸ ನೋಟ್ಸ್ ಜೀವಶಾಸ್ತ್ರ/ ಬಿಸಿನೆಟ್ ಸ್ಟಡೀಸ್ ನೋಟ್ಸ್
ವಿದ್ಯಾರ್ಥಿಗಳಿಗೆ ಪ್ರತಿದಿನ 45 ನಿಮಿಷಗಳ 4 ತರಗತಿಗಳನ್ನು ನಡೆಸಲು ಚಿಂತಿಸಲಾಗಿದ್ದು, ಪ್ರತಿದಿನ ಬೆಳಗ್ಗೆ 9 ರಿಂದ 12 ಗಂಟೆವರೆಗೆ ಪಾಠಗಳನ್ನು ಬೋಧಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
ಒಂದನೇ ಅವಧಿಯಲ್ಲಿ ವಿಡಿಯೊ ತರಗತಿ, ಎರಡನೇ ಅವಧಿಯಲ್ಲಿ ಈ ತರಗತಿಗೆ ಸಂಬಂಧಿಸಿದ ಸಂದೇಹ ನಿವಾರಣೆ, ನೋಟ್ಸ್, ಬರವಣಿಗೆ ಇರಲಿದೆ. ಆಯಾ ಕಾಲೇಜಿನ, ಆಯಾ ವಿಷಯಗಳ ಉಪನ್ಯಾಸಕರು ಈ ಬಗ್ಗೆ ನಿಗಾ ವಹಿಸಬೇಕು. ಜಿಲ್ಲಾ ಉಪ ನಿರ್ದೇಶಕರು, ಪ್ರಾಂಶುಪಾಲರ ಹೆಗಲಿಗೆ ಜವಾಬ್ದಾರಿ ನೀಡಲಾಗಿದೆ. ಇವರ ಮೂಲಕ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತಲುಪಿಸಿ ಪ್ರತಿ ದಿನ ತರಗತಿಗಳನ್ನು ವೀಕ್ಷಿಸಲು ಪ್ರೇರೇಪಿಸಬೇಕು. ಆಯಾ ಪಾಠಕ್ಕೆ ಸಂಬಂಧಿಸಿದ ನೋಟ್ಸ್‌ಗಳು ಅದೇ ದಿನ ಲಭ್ಯವಾಗಲಿವೆ ಎಂದು ಪಿಯು ಮಂಡಳಿ ಸೂಚಿಸಿದೆ.
ವೇಳಾಪಟ್ಟಿಯಂತೆ ವಿಡಿಯೊ ವೀಕ್ಷಿಸಲು ಸಾಧ್ಯವಾಗದಿದ್ದರೆ ಲಿಂಕ್ ಬಳಸಿ ಬೇರೆ ದಿನಗಳಲ್ಲಿ ಮತ್ತು ಪುನರಾವರ್ತಿತವಾಗಿ ವೀಕ್ಷಿಸಬಹುದು.
ಈ ಕುರಿತು ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ನಿಗಾ ವಹಿಸಬೇಕು. ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ವಿಷಯವಾರು ಉಪನ್ಯಾಸಕರಿಗೆ ವಿಂಗಡಿಸಿ ಅಪ್ ಲೋಡ್ ಆಗಿರುವ ಪ್ರಿ-ರೆಕಾರ್ಡೆಡ್ ವಿಡಿಯೊ ವೀಕ್ಷಿಸಲು ಸೂಚಿಸಬೇಕು. ಸಂದೇಹಗಳಿದ್ದರೆ ವಾಟ್ಸ್‌ಆಯಪ್ ಮೂಲಕ ಪರಿಹರಿಸುವಂತೆ ಸೂಚನೆ ನೀಡಲಾಗಿದೆ.
ಎಲ್ಲ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಈ ಸಂಬಂಧ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಸ್ಮಾರ್ಟ್ ಫೋನ್, ಲ್ಯಾಪ್‌ಟಾಪ್ ಅಥವಾ ಇಂಟರ್‌ನೆಟ್ ಸೌಲಭ್ಯ ಹೊಂದಿರದ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭವಾದ ಬಳಿಕ ಮತ್ತೂಮ್ಮೆ ಈ ಪಾಠಗಳನ್ನು ಉಪನ್ಯಾಸಕರ ಮೂಲಕ ಬೋಧಿಸಲಾಗುತ್ತದೆ. ಕೋವಿಡ್ 19 ಹಿನ್ನೆಲೆಯಲ್ಲಿ ತರಗತಿ ಆರಂಭ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯೂಟ್ಯೂಬ್ ಕ್ಲಾಸ್ ಆರಂಭಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
