ಮಂಡ್ಯ
ಮಹಿಳೆಯ ಚಪ್ಪಲಿ ಹೊಡೆತದಿಂದ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ರಾಮಯ್ಯ ಕಾಲೋನಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಸ್ವತಂತ್ರ (24) ಅಂತ ತಿಳಿದು ಬಂದಿದೆ. ಈತ ಕೆ.ಆರ್.ಪೇಟೆ ಪುರಸಭೆಯ ವಸತಿ ಯೋಜನಾ ವಿಭಾಗದಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆ ಹಿನ್ನಲೆ :
ಇಂದು ಮೃತ ಸ್ವತಂತ್ರ ಆಸ್ಪತ್ರೆಗೆ ಹೋಗಿದ್ದ ವೇಳೆಯಲ್ಲಿ ಆತ ನಿಂತಿದ್ದ ಸರತಿ ಸಾಲಿನಲ್ಲಿ ಮಹಿಳೆಯೊಬ್ಬಳು ಆತನ ಮುಂದೆ ಬಂದು ನಿಂತಿದ್ದಾಳೆ. ಈ ವೇಳೆ ಆಗ ನಾನು ಅಕ್ಕ ನಾನು ಮೊದಲು ನಿಂತಿದ್ದು ಹಿಂದೆ ಹೋಗಿ ಅಂತ ಹೇಳಿ ಹಿಂದೆ ತಳ್ಳಿದೆ. ಈ ವೇಳೆಯಲ್ಲಿ ಆಕೆ ನನ್ನ ಮೇಲೆ ಸಿಟ್ಟಾಗಿ ಎಲ್ಲರ ಮುಂದೆ ನನಗೆ ಚಪ್ಪಲಿಯಲ್ಲಿ ಹೊಡೆದಳು. ಆಕೆ ಮಾಡಿದ ಕೆಲಸದಿಂದ ನನಗೆ ಸಾಕಷ್ಟು ನೋವು, ಹಾಗೂ ಅವಮಾನವಾಯಿತು. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂದಾಗಿರುವೆ ಅಂತ ತನ್ನ ತಾಯಿಗೆ ಬರೆದಿರುವ ಡೆತ್ ನೋಟಿನಲ್ಲಿ ನನ್ನ ದೂಷಿಸಬೇಡ, ಮಿಸ್ ಯು ಅಮ್ಮ ಅಂತ ಬರೆದಿದ್ದಾನೆ.
ಯುವಕನ ಸಾವಿನಿಂದ ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಪ್ರಕರಣ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ