ಮೆರವಣಿಗೆ ವೇಳೆ ಡಿಕೆಶಿ ಕೈಯಲ್ಲಿ ಜೆಡಿಎಸ್ ಭಾವುಟ!!

ಬೆಂಗಳೂರು:

      ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಡಿ.ಕೆ ಶಿವಕುಮಾರ್‌ ಅವರು ಜಾಮೀನು ಪಡೆದು ಶನಿವಾರ ಬೆಂಗಳೂರಿಗೆ ಆಗಮಿಸಿದರು.

      ಶನಿವಾರ ದೆಹಲಿಯಿಂದ ಬೆಂಗಳೂರಿಗೆ ಬಂದಿಳಿದ ಡಿಕೆ ಶಿವಕುಮಾರ್ ಅವರನ್ನು ಸ್ವಾಗತಿಸಲು ಲಕ್ಷಾಂತರ ಜನ ಸೇರಿದ್ದರು.
ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮೆರವಣಿಗೆ ಮೂಲಕ ಬರುವ ವೇಳೆ ಜೆಡಿಎಸ್ ನ ಹಲವು ಕಾರ್ಯಕರ್ತರೂ ಭಾಗಿಯಾಗಿದ್ದರು. ಅವರ ಕೈಲಿದ್ದ ಪಕ್ಷದ ಧ್ವಜವನ್ನು ಡಿಕೆ ಶಸಿವಕುಮಾರ್ ಅವರಿಗೆ ನೀಡಲಾಯ್ತು. ಆದರೆ ಧ್ವಜವನ್ನು ನೋಡದೆ ಅವರು ತೆಗೆದುಕೊಂಡರೆ? ಅಥವಾ ನೋಡಿಯೂ ಕಾರ್ಯಕರ್ತರ ಮೇಲಿನ ಅಭಿಮಾನದಿಂದ ತೆಗೆದುಕೊಂಡರೇ? ಎಂಬುದೇ ಅನುಮಾನವಾಗಿದೆ.

      ಶನಿವಾರ ಡಿಕೆ ಶಿವಕುಮಾರ್ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಡಿಕೆಶಿ ಅವರನ್ನು ವಿಮಾನ ನಿಲ್ದಾಣದಲ್ಲೇ ಭರಮಾಡಿಕೊಂಡಿದ್ದರು. ಈ ಬಗ್ಗೆ ನಂತರ ಡೀಕೆಶಿ ಅವರು ನಡೆಸಿದ ಸುದ್ಧಿಗೋಷ್ಠಿಯಲ್ಲೂ ಸ್ಮರಿಸಿದ್ದ ಡಿಕೆಶಿ, ಧನ್ಯವಾದ ಅರ್ಪಿಸಿದ್ದರು. ಈಗ ಜೆಡಿಎಸ್ ಧ್ವಜ ಹಿಡಿದಿರುವುದು ಜನತಾದಳದ ಕಾರ್ಯಕರ್ತರಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ