ಬಳ್ಳಾರಿ: 
ಸರ್ಕಾರ ಪಕ್ವವಾಗಿ ಇನ್ನು ನಡೆಯುತ್ತಿಲ್ಲ ಎಂಬ ವಿರೋಧ ಪಕ್ಷದ ಆರೋಪದ ಜೊತೆಯಲ್ಲಿಯೇ ಪರಿಷತ್ ಸಭಾಪತಿ ಅಧಿಕಾರಿಗಳ ಬೇಜವಾಬ್ದಾರಿಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಅವರ ಆದೇಶವನ್ನು ರಾಜ್ಯದ ಅಧಿಕಾರಿಗಳೂ ಪಾಲಿಸುತ್ತಿಲ್ಲ ಎಂದು ಬಸವರಾಜ್ ಹೊರಟ್ಟಿ ಅವರು ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಮಂಡ್ಯದ ರೈತರ ಆತ್ಮಹತ್ಯೆಯಿಂದ ಕಣ್ಣೀರು ಬರುತ್ತದೆ . ಅಧಿಕಾರಿಗಳು ಸಿಎಂ ಕುಮಾರಸ್ವಾಮಿಯವರ ಆದೇಶ ಪಾಲಿಸಿದ್ದರೆ ಆ ರೈತನ ಆತ್ಮಹತ್ಯೆ ತಡೆಯಬಹುದಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅನ್ನದಾತರ ಆತ್ಮಹತ್ಯೆಯಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳು ಸಾಲಮನ್ನಾ ಮಾಡಿದ್ದಾರೆ, ಅಧಿಕಾರಿಗಳು ಸಾಲಮನ್ನಾ ಜಾರಿ ಮಾಡಲು ವಿಳಂಬ ನೀತಿ ತೋರುತ್ತಿದ್ದಾರೆ. ಮಂಡ್ಯದ ರೈತನ ಆತ್ಮಹತ್ಯೆ ವಿಚಾರದಲ್ಲಿ ತೋಟಗಾರಿಕೆ ಸಚಿವ ಮನಗೂಳಿ ನೀಡಿದ ಹೇಳಿಕೆ ಸರಿಯಲ್ಲ. ತೋಟಗಾರಿಕೆ ಸಚಿವರ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಬೇಕು. ರೈತರ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಶನಿವಾರ ಮಂಡ್ಯ ಘಟನೆ ಬಗ್ಗೆ ಟಿವಿಯಲ್ಲೂ ನೋಡುತ್ತಿದ್ದೆ, ಆದರೆ ಘಟನೆ ನೋಡಿದ ನಂತರ ನಮ್ಮ ರಾಜ್ಯದ ಪರಿಸ್ಥಿತಿಯ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








