ನವದೆಹಲಿ:
ಸ್ವಾತಂತ್ರ್ಯ ಪೂರ್ವದಲ್ಲಿ ಕೇಳಿ ಬರುತ್ತಿದ್ದ ಗುಲಾಮಗಿರಿ ಜೀತ ಪದ್ದತಿ ಈ ಮಾತು ಮತ್ತೆ ಬ್ರಿಟೀಶ್ ನೆಲದಲ್ಲಿ ಕೇಳಿ ಬಂದಿದೆ. ಬ್ರಿಟನ್ ನ ಕೇರ್ ಹೋಮ್ ಗಳಲ್ಲಿ ಕಾರ್ಯನಿರ್ವಹಿಸುವ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಧುನಿಕ ಗುಲಾಮಗಿರಿಗೆ ಗುರಿಯಾಗಿದ್ದಾರೆ ಎಂಬ ವರದಿ ಆಧರಿಸಿ ಭಾರತದ ಧೂತವಾಸದಿಂದ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
ನಾರ್ತ್ ವ್ಹೇಲ್ಸ್ ನಲ್ಲಿ ಈ ರೀತಿಯ ಘಟನೆ ವರದಿಯಾಗಿದ್ದು, ಲಂಡನ್ ನಲ್ಲಿರುವ ಭಾರತೀಯ ಹೈ ಕಮಿಷನ್ ವಿದ್ಯಾರ್ಥಿಗಳ ಸಹಾಯಕ್ಕೆ ನೆರವಿನ ಹಸ್ತ ಚಾಚಿದ್ದು, ಈ ರೀತಿಯ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೆರವು ಕೇಳುವಂತೆ ಕರೆ ನೀಡಿದೆ.
ಕಾರ್ಮಿಕರ ಶೋಷಣೆಯ ತಡೆಗಾಗಿ ಇರುವ ಬ್ರಿಟನ್ ಸರ್ಕಾರದ ಗುಪ್ತಚರ ಹಾಗೂ ತನಿಖಾ ಸಂಸ್ಥೆ ಗ್ಯಾಂಗ್‌ಮಾಸ್ಟರ್‌ಗಳು ಮತ್ತು ಕಾರ್ಮಿಕ ನಿಂದನೆ ಪ್ರಾಧಿಕಾರ ಈ ವಾರದಲ್ಲಿ ವರದಿ ಪ್ರಕಟಿಸಿ, ಕಾರ್ಮಿಕರ ನಿಂದನೆ ವಿರುದ್ಧ ಕೋರ್ಟ್ ಆದೇಶ ತರುವುದರಲ್ಲಿ ಯಶಸ್ವಿಯಾಗಿದೆ ಎಂದು ಹೇಳಿತ್ತು.
