ಯುವಕರು ದುಶ್ಚಟಗಳಿಗೆ ಒಳಗಾಗಬೇಡಿ: ಟಿ.ವಿಜಯ್‌ಕುಮಾರ್

ನಾಯಕನಹಟ್ಟಿ :

      ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸಿ ಶಿಕ್ಷಣದಿಂದಲೇ ಮುಂದುವರೆಯಲು ಸಾಧ್ಯ, ಅಂಬೇಡ್ಕರ್ ಬರೆದ ಸಂವಿಧಾನದಿಂದಲೇ ನಾನು ವೇಧಿಕೆಯಲ್ಲಿ ಮಾತನಾಡುತ್ತಿರುವುದು. ಅವರು ಸಂವಿಧಾನ ಬರೆಯದೇ ಹೋಗಿದ್ದರೆ ನಾವು ಸಮಾನವಾಗಿ ಯಾರೂ ಬದುಕುತ್ತಿರಲಿಲ್ಲ. ಜೀತದಾಳುಗಳಾಗಿಯೇ ಇರಬೇಕಾಗಿತ್ತು. ಬಾಲ್ಯದಲ್ಲಿಯೇ ಸಾಕಷ್ಟು ನೋವುಗಳನ್ನು ಅನುಭವಿಸಿ ಇಡೀ ಪ್ರಪಂಚವೇ ಮೆಚ್ಚುವಂತಹ ಸಂವಿಧಾನವನ್ನು ರಚಿಸಿದ್ದಾರೆ. ತಂದೆಯ ಆಸ್ತಿಯಲ್ಲಿ ಮಹಿಳೆಯರಿಗೆ ಸಮಪಾಲು ದೊರೆಯಬೇಕೆಂದು ಹೋರಾಟ ಮಾಡಿದರು. ಸಂವಿಧಾನದಿದಲೇ ಇವತ್ತು ಮಹಿಳೆಯರು ರಾಷ್ಟçಪತಿ, ಮುಖ್ಯಮಂತ್ರಿ ಹಾಗೂ ಇನ್ನೂ ಅನೇಕ ಉನ್ನತ ಹುದ್ದೆಗಳಲ್ಲಿ ತೊಡಗಿದ್ದಾರೆ. ಸಂವಿಧಾನ ಈ ದೇಶದ ಆಸ್ತಿ ಸಂವಿಧಾನ ಇರದೇ ಹೋಗಿದ್ದರೆ. ಈ ದೇಶ ಅನಾಥವಾಗುತ್ತಿತ್ತು. ಆದ್ದರಿಂದ ಮಹಿಳೆಯರು ಮೂಢನಂಬಿಕೆಯಿಂದ ದೂರ ಇರಿ ಎಂದು ಮನವಿ ಮಾಡಿಕೊಂಡರು.

   ಸಮಾಜ ಪರಿರ್ತನ ಚಳುವಳಿಯ ಎಸ್. ಪರಮೇಶ್ ಮಾತನಾಡಿ ನಮ್ಮ ತಂದೆ ತಾಯಿಗಳು ನಮಗೆ ಜನ್ಮ ಕೊಟ್ಟಿದ್ದಾರೆ. ಆದರೆ ನಿಜವಾದ ಬದುಕನ್ನು ಕೊಟ್ಟಿದ್ದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ವಿಶ್ವಾಜ್ಞಾನಿ ಅಂಬೇಡ್ಕರ್ ಅವರು ಭಾರತಕ್ಕೆ ವಿಶೇಷವಾದ ಕೊಡುಗೆಯನ್ನು ನೀಡುವುದರ ಮೂಲಕ ಭಾರತವನ್ನು ನವಭಾರತವನ್ನಾಗಿ ನಿರ್ಮಾಣ ಮಾಡಿದ್ದಾರೆ. ಮೊಟ್ಟ ಮೊದಲು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡುವುದರ ಮೂಲಕ ಸರ್ವ ಸಮುದಾಯಗಳಿಗೂ ಶಿಕ್ಷಣವನ್ನು ನೀಡಿ ಭಾರತವನ್ನು ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ. ಜೊತೆಗೆ ಭಾರತದ ಸಂವಿಧಾನದಲ್ಲಿ ಅನುಚ್ಚೇಧ ೨೧ ರಲ್ಲಿ ಉದ್ಯೋಗದ ಸ್ವಾತಂತ್ರ‍್ಯವನ್ನು ನೀಡುವುದರ ಮೂಲಕ ಪ್ರತಿ ಪ್ರಜೆಗಳಿಗೂ ಘನತೆ, ಗೌರವ, ಸ್ವಾಭಿಮಾನದಿಂದ ಬದುಕುವ ಸ್ವಾತಂತ್ರವನ್ನು ನೀಡಿದರು.

    ಇದರ ರೂವಾರಿ ಬಾಬಾ ಸಾಹೇಬ್ ಅಂಬೇಡ್ಕರ್. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬ ಆಯುಧವನ್ನು ಯಾವುದೇ ಜಾತಿ, ಲಿಂಗ, ಧರ್ಮ ಭೇಧವಿಲ್ಲದೆ ಸರ್ವರಿಗೂ ಮತ ಹಾಕುವ ಹಕ್ಕನ್ನು ಕೊಟ್ಟಿದ್ದಾರೆ.. ಮತ ಹಾಕುವ ಅಧಿಕಾರ ನಮಗೆ ಬಂದಮೇಲೆ ಘನತೆ, ಗೌರವಗಳು ಪ್ರಾಪ್ತವಾಗಿವೆ. ಮಹಿಳೆಯರಿಗೆ ವಿಶೇಷವಾಗಿ ಇವತ್ತು ಆಸ್ತಿಯ ಹಕ್ಕು, ವಿವಾಹದ ಹಕ್ಕು,ಧಾರ್ಮಿಕ ಹಕ್ಕು, ಎಲ್ಲವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ.ಮಹಿಳೆಯರು ದೇಶದ ಪ್ರಗತಿಯ ಹೆಜ್ಜೆಗುರುತು ಆಗಲಿಕ್ಕೆ ಇವರೇ ಕಾರಣ. ಅಂಬೇಡ್ಕರ್ ಸಂವಿಧಾನಕ್ಕಿAತ ಮುಂಚೆ ಕಾರ್ಮಿಕರು ಪ್ರಾಣಿಗಳ ತರ ಬದುಕುತ್ತಿದ್ದರು.. ಸಂವಿಧಾನ ಬರೆದ ಮೇಲೆ ಕಾರ್ಮಿಕರ ಬದುಕು ಬದಲಾವಣೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಲು ಬಾಬಾ ಸಾಹೇಬರು ಕಾರಣ ಎಂದರು.

    ತಾಲ್ಲಕು ಸಂಘಟನಾ ಸಂಚಾಲಕರಾದ ಆರ್. ವೀರಭದ್ರ ಮಾತನಾಡಿ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು ಎಂಬ ಅಂಬೇಡ್ಕರ್‌ರವರ ಮಾತನ್ನು ನಾವು ಇಲ್ಲಿ ಸ್ಮರಿಸಬೇಕಿದೆ. ಎಲ್ಲಾ ಜಾತಿ, ಜನಾಂಗದವರಿಗೆ ಮತದಾನದ ಹಕ್ಕಿನ ಮಹತ್ವವನ್ನು ಮಂಡಿಸಿದರು. ಕುಡಿಯುವ ನೀರಿನ ಹಕ್ಕಿಗಾಗಿ ದೊಡ್ಡಮಟ್ಟದ ಹೋರಾಟ ಮಾಡಿದರು. ಬಾಲ್ಯದಲ್ಲಿಯೇ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ನೋವುಗಳನ್ನು ತಿಂದು, ೩೫ ಪದವಿ ಪಡೆದ ಏಕೈಕ ವ್ಯಕ್ತಿ. ಯುವಕರು, ವಿದ್ಯಾವಂತರು ದೇವಸ್ಥಾನದ ಗಂಟೆ ಹೊಡೆಯಿವುದಕ್ಕಿಂತ ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳನ್ನು ಓದಿ, ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಪಡೆಯಬೇಕು ಎಂದು ಮನವಿ ಮಾಡಿಕೊಂಡರು. ಒಬ್ಬ ವ್ಯಕ್ತಿ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಇರುವುದಕ್ಕೆ ಸಂವಿಧಾನವೇ ಕಾರಣ ಎಲ್ಲಾ ವರ್ಗಗಳಿಗೆ ಮತದಾನದ ಹಕ್ಕು ತಂದು ಕೊಟ್ಟಂತಹ ಅವರು ಒಬ್ಬ ವಿಶ್ವ ಜ್ಞಾನಿ ಎಂದರು. ಮಹಿಳೆಯರಿಗಾಗಿ, ಕಾರ್ಮಿಕರ ಪರವಾಗಿ ಹೋರಾಟ ಮಾಡಿದರು, ಮೂಕನಾಯಕ ಪತ್ರಿಕೆಯ ಸಂಪಾದಕರಾಗಿದ್ದರು ಎಂದು ಅವರು ಮಾತನಾಡಿದರು.

ಕೆ.ಪಿ.ಸಿ.ಸಿ. ರಾಜ್ಯ ಸಂಚಾಲಕರಾದ ವಕೀಲ ಹಿರೇಹಳ್ಳಿ ಮಲ್ಲೇಶ್ ಮಾತನಾಡಿ ನಾವೆಲ್ಲರೂ ಅಂಬೇಡ್ಕರ್ ಮಾರ್ಗದಲ್ಲಿ ನಡೆಯಬೇಕು ಅವರ ಆದರ್ಶಗಳನ್ನು ಪರಿಪಾಲನೆ ಮಾಡಬೇಕು ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಬೇಕು. ಜೀವನದಲ್ಲಿ ಪ್ರತಿಯೊಬ್ಬರೂ ಅಂಬೇಡ್ಕರ್ ತತ್ವ ಮತ್ತು ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಜಾತಿ ಗಣತಿಗೆ ಬಂದಾಗ ಮಾದಿಗ ಎಂದು ಬರೆಯಿಸಬೇಕು. ಮುಂಬರುವ ೧೦ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ೧೦ ಸಾವಿರ, ಪಿ.ಯು,ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ೨೦ ಸಾವಿರ ಹಣ ಕೊಡುತ್ತೇನೆ ಎಂದು ವೇಧಿಕೆಯಲ್ಲಯೇ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಎಸ್.ಬಿ.ತಿಪ್ಪೇಸ್ವಾಮಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರೋಗ್ಯ ಇಲಾಖೆ ಚಳ್ಳಕೆರೆ ಎನ್.ಹೊನ್ನೂರಸ್ವಾಮಿ, ತಾಲ್ಲೂಕು ಸಂಘಟನಾ ಸಂಚಾಲಕರು ಕೆ.ಬಿ. ನಾಗರಾಜ್ ನೆಲಗೇತನಹಟ್ಟಿ ರಾಜಣ್ಣ, ಪಾಲಾಕ್ಷ, ಜಗನ್ನಾಥ್, ಪೋರ್ನ ಓಬಯ್ಯ , ಸುರೇಶ್, ದ್ಯಾವರನಹಳ್ಳಿ, ಜಿ.ತಿಪ್ಪೇಸ್ವಾಮಿ ಜಿಲ್ಲಾ ಅಧ್ಯಕ್ಷರು ಮಾದಿಗ ದಂಡೋವರ, ವೆಂಕಟೇಶ್, ಕ್ರಾಂತಿ ಗೀತೆ ಟಿ.ವಿ. ಪ್ರಭಾಕರ್ ಮತ್ತು ತಂಡದವರು ನೆಲಗೇತನಹಟ್ಟಿ, ಎತ್ತಿನಹಟ್ಟಿ ತಿಪ್ಪೇಸ್ವಾಮಿ, ಗ್ರಾಮ ಶಾಖೆ ಸಂಘಟಕರು ಹಟ್ಟಿಯ ಯಜಮಾನರು ನೌಕರರ ವರ್ಗ ನೆಲಗೇತನಹಟ್ಟಿ ದಾಸೋಹ ದಾನಿಗಳು, ಹಟ್ಟಿಯ ಉಳಿತಾಯ ಯುವಕರ ಸಂಘ, ಊರಿನ ಗ್ರಾಮಸ್ಥರು, ಯುವಕರು, ಇದ್ದರು.

 ಯುವಕರು ದುಶ್ಚಟಗಳಿಗೆ ಒಳಗಾಗಬೇಡಿ, ದುಡಿಮೆ ಮಾಡಿ, ನಿಮ್ಮ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ತಾಲ್ಲೂಕು ಸಂಚಾಲಕರಾದ ಟಿ.ವಿಜಯ್‌ಕುಮಾರ್ ಹೇಳಿದ್ದಾರೆ.ಸಮೀಪದ ನೆಲಗೇತನಹಟ್ಟಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ:ಬಿ.ಕೃಷ್ಣಪ್ಪ ಸ್ಥಾಪಿತ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್‌ರವರ ೧೩೪ನೇ ಜನ್ಮ ದಿನಾಚರಣೆಯ ಪ್ರಯುಕ್ತ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

Recent Articles

spot_img

Related Stories

Share via
Copy link