ಹೃದಯಾಘಾತದಿಂದ ಖ್ಯಾತ ನಟ ಸುದೀಪ್ ಪಾಂಡೆ ನಿಧನ….!

ಮುಂಬೈ :

    ಹೃದಯಘಾತದಿಂದ ಅನೇಕ ಹೀರೋಗಳು ನಿಧನ ಹೊಂದಿದ್ದಾರೆ. ಈಗ ಭೋಜ್ಪುರಿ ಭಾಷೆಯ ನಟ ಹಾಗೂ ನಿರ್ಮಾಪಕ ಸುದೀಪ್ ಪಾಂಡೆ ಅವರು ಮೃತಪಟ್ಟಿದ್ದಾರೆ. ಅವರಿಗೆ ಹೃದಯಾಘಾತ ಉಂಟಾಗಿದೆ. ಸುದೀಪ್ ಪಾಂಡೆ ನಿಧನ ವಾರ್ತೆ ಅವರ ಅಭಿಮಾನಿಗಳಿಗೆ ಹಾಗೂ ಭೋಜ್ಪುರಿ ಇಂಡಸ್ಟ್ರಿಗೆ ಬರಸಿಡಿಲು ಬಡಿದಂತೆ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ.

    ಜನವರಿ 5ರಂದು ಸುದೀಪ್ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅವರಿಗೆ ಅಭಿಮಾನಿಗಳು ಶುಭಾಶಯ ಕೋರಿದ್ದರು. ಜನ್ಮದಿನಾಚರಣೆ ಮುಗಿಸಿದ ಬಳಿಕ ಅವರು ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದರು. ಅವರು ತಮ್ಮ ಮುಂದಿನ ಚಿತ್ರದ ಶೂಟ್​ಗಾಗಿ ಮುಂಬೈಗೆ ಬಂದಿದ್ದರು. ಅವರು ನಟಿಸುವಾಗಲೇ ಹೃದಯಾಘಾತ ಆಗಿದೆ ಎನ್ನಲಾಗಿದೆ. ಆ ಬಳಿಕ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನ ಆಗಿಲ್ಲ.
   ಸುದೀಪ್ ಪಾಂಡೆ ಅವರು 2007ರಲ್ಲಿ ಚಿತ್ರರಂಗಕ್ಕೆ ಬಂದರು. ‘ಭೋಜ್​ಪುರಿಯಾ ಭಯ್ಯಾ’ ಅವರ ಮೊದಲ ಸಿನಿಮಾ. ಅವರು ಕಡಿಮೆ ಸಮಯದಲ್ಲಿ ಖ್ಯಾತಿ ಪಡೆದರು. ಅವರು ಆ್ಯಕ್ಷನ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ‘ಖೂನಿ ದಂಗಲ್’ ‘ಮಸಿಹಾ ಬಾಬು’, ‘ಹಮರ್ ಸಂಗಿ ಬಜರಂಗಿ ಬಲಿ’, ‘ಹಮಾರ್ ಲಾಲ್ಕರ್’, ‘ಶರಾಬಿ’, ‘ಖುರಬಾನಿ’ ಮೊದಲಾದ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ಇನ್ನೂ ಬದುಕಿ ಬಾಳಬೇಕಿದ್ದ ಅವರು ಆಗಲೇ ಅವರು ಕೊನೆಯಿಸಿರು ಎಳೆದಿದ್ದಾರೆ. ರಾಜಕೀಯದ ಜೊತೆ ನಂಟು ಹೊಂದಿದ್ದ ಸುದೀಪ್ ಅವರು, ಎನ್‌ಸಿಪಿ ಪಕ್ಷದ ಸದಸ್ಯರಾಗಿದ್ದರು. ಈ ಮೊದಲು ಅವರು ಸಾಫ್ಟ್ ವೇರ್ ಇಂಜಿನಿಯರ್ ಕೂಡ ಆಗಿದ್ದರು.
   ಸುದೀಪ್ ಪಾಂಡೆ ಅವರು ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದರು. ಜಿಮ್​ನಲ್ಲಿ ನಿತ್ಯವೂ ವರ್ಕೌಟ್ ಮಾಡುತ್ತಿದ್ದರು. ಅವರಿಗೆ ಹ್ಯಾಂಡ್ಸಮ್ ಹಂಕ್ ಎಂಬ ಬಿರುದೂ ಇತ್ತು. ಇಷ್ಟು ಫಿಟ್ ಆಗಿದ್ದರೂ ಹೃದಯಾಘಾತ ಆಗಿದ್ದು ಹೇಗೆ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ. 

ಸುದೀಪ್ ಪಾಂಡೆ ಕೂಡ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಅವರ ಸ್ನೇಹಿತರೊಬ್ಬರು ಹೇಳಿದ್ದಾರೆ. ‘ವಿಕ್ಟರ್’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಚಿತ್ರ ಫ್ಲಾಪ್ ಆದ ಕಾರಣ ಸುದೀಪ್ ತಮ್ಮ ಎಲ್ಲಾ ಹಣವನ್ನು ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದರು.

Recent Articles

spot_img

Related Stories

Share via
Copy link